ಜಿದ್ದ, ನ06(SS): ಮಂಗಳೂರು ಇಂಡಿಯನ್ ಸೋಶಿಯಲ್ ಫಾರಂ ಜಿದ್ದ ಇದರ ಆಶ್ರಯದಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಶರಫಿಯಾ ಜಿದ್ದದ ಲಕ್ಕಿ ದರ್ಬಾರ್ ಹೊಟೇಲ್ ಸಭಾಂಗಣದಲ್ಲಿ ಆಚರಿಸಲಾಯಿತು.
ಇಂಡಿಯನ್ ಸೋಶಿಯಲ್ ಫಾರಂನ ಪಶ್ಚಿಮ ಪ್ರಾಂತ್ಯದ ಅಧ್ಯಕ್ಷರಾದ ಮಹಮ್ಮದ್ ಅಲಿ ಮೂಲೂರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಸಂಘಟನೆಯ ಕಾರ್ಯದರ್ಶಿಯಾದ ರಫೀಕ್ ಮಠ ಕರ್ನಾಟಕದ ಇತಿಹಾಸದ ಮತ್ತು ಕನ್ನಡ ಭಾಷೆಯ ಕುರಿತು ಸ್ವವಿವರವಾಗಿ ಮಾಹಿತಿ ನೀಡಿದರು.
ಕನ್ನಡ ಭಾಷೆ ಉಳಿಸಬೇಕು. ಕರ್ನಾಟಕದ ಇತಿಹಾಸ ಪರಂಪರೆಯುಳ್ಳದು. ಅದು ಬೆಳೆಯಬೇಕು. ಮುಂದಿನ ಜನರಿಗೂ ಅದರ ಮಹತ್ವ ಗೊತ್ತಾಗಬೇಕು. ಕನ್ನಡ ಭಾಷೆ ಎಲ್ಲರ ಉಸಿರಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಐಎಸ್ಎಫ್ ಸೆಂಟ್ರಲ್ ಕಮೀಟಿ ಉಪಾಧ್ಯಕ್ಷ ಹನೀಫ್ ಹಾರಿಸ್, ರಾಜ್ಯ ಸಮಿತಿ ಸದಸ್ಯ ಮಹಮ್ಮದ್ ಆರೀಫ್ ಬಜಪೆ, ಉಪಾಧ್ಯಕ್ಷ ಮಹಮ್ಮದ್ ಇಸ್ಮಾಯಿಲ್ ಕಲ್ಲಡ್ಕ, ಮತ್ತಿತರರು ಉಪಸ್ಥಿತರಿದ್ದರು.