ಬೆಳ್ತಂಗಡಿ, ಸೆ 18 (DaijiworldNews/MS): ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಯುವಕರನ್ನು ಕುವೆಟ್ಟು ಗ್ರಾಮದ ಸಬರಬೈಲು ಎಂಬಲ್ಲಿ ಬೆಳ್ತಂಗಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಮದ್ದಡ್ಕದ ಚಿಲಿಂಬಿ ನಿವಾಸಿ ಮಹಮ್ಮದ್ ರಫೀಕ್ (35) ಹಾಗೂ ನೌಪಾಲ್(25) ಎಂದು ಗುರುತಿಸಲಾಗಿದೆ
ಸೆ.17ರ ಸಂಜೆ ವಾಹನ ತಪಾಸಣೆ ನಡೆಸುತ್ತಿರುವ ವೇಳೆಯಲ್ಲಿ ಪುಂಜಾಲಕಟ್ಟೆ ಕಡೆಯಿಂದ ಗುರುವಾಯನಕೆರೆ ಕಡೆಗೆ ಬರುತ್ತಿರುವ ಕೆಎ-20-ಇಪಿ-1929 ನೇ ಟಿವಿಎಸ್ ವೇಗೋ ಮೋಟಾರ್ ಸೈಕಲ್ ನ್ನು ನಿಲ್ಲಿಸಿ ಪರಿಶೀಲಿಸಿದಾಗ ಗಾಂಜಾ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.
ಆರೋಪಿಗಳು ಸಾಗಿಸುತ್ತಿದ್ದ 45,850 ರೂ. ಮೌಲ್ಯದ ಒಟ್ಟು 1,310 ಗ್ರಾಂ ಗಾಂಜಾವನ್ನು ಹಾಗೂ ಸಾಗಾಟಕ್ಕೆ ಬಳಸಿದ ಮೋಟಾರ್ ಸೈಕಲ್ ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.