ಬೆಂಗಳೂರು, ನ06(ss): ರಾಷ್ಟ್ರನಾಯಕರ ಹಾಗೂ ದೇವತೆಗಳ ಭಾವಚಿತ್ರಗಳಿರುವ ಚೀನಾದ ಅಕ್ರಮ ಮಾರಾಟದ ಪಟಾಕಿಗಳನ್ನು ಸಿಡಿಸಬಾರದು ಎಂದು ಹಿಂದೂ ಜನಜಾಗೃತಿ ಸಮಿತಿ ದೀಪಾವಳಿ ಆಚರಣೆ ಸಂದರ್ಭದಲ್ಲಿ ಮನವಿ ಮಾಡಿಕೊಂಡಿದೆ.
ಮುಂಬರಲಿರುವ ದೀಪಾವಳಿಗೆ ಈ ರೀತಿಯ ಪಟಾಕಿಗಳನ್ನು ಬಳಸದಂತೆ ತಡೆಯಲಾಗುವುದು. ಈ ಕುರಿತು ಈಗಾಗಲೇ ಶಿವಕಾಶಿಯ ಪಟಾಕಿ ತಯಾರಕ ಮತ್ತು ವಿತರಕ ಸಂಘಕ್ಕೆ ಪತ್ರ ಬರೆಯಲಾಗಿದೆ. ಮಹಾರಾಷ್ಟ್ರ ವಾಣಿಜ್ಯ ಮಂಡಳಿ ಪಟಾಕಿಯಲ್ಲಿ ದೇವರ ಚಿತ್ರ ಮುದ್ರಣ ನಿಷೇಧಿಸಿದೆ. ಕರ್ನಾಟಕದಲ್ಲೂ ಅದೇ ರೀತಿ ಆಗಬೇಕು ಎಂದು ಒತ್ತಾಯಿಸಿದ್ದಾರೆ.
ರಾಷ್ಟ್ರನಾಯಕರ ಹಾಗೂ ದೇವತೆಗಳ ಭಾವಚಿತ್ರಗಳಿರುವ ಪಟಾಕಿಗಳನ್ನು ಸುಡುವುದರಿಂದ ಜನರ ಧಾರ್ಮಿಕ ಭಾವನೆ ಹಾಗು ದೇಶ ಪ್ರೇಮಕ್ಕೆ ಧಕ್ಕೆ ಉಂಟಾಗಲಿದೆ. ಮಾತ್ರವಲ್ಲ, ಛಿದ್ರಗೊಂಡ ಹಾಳೆಗಳ ತುಂಡುಗಳು ರಸ್ತೆಗಳಲ್ಲಿ, ಚರಂಡಿಗಳಲ್ಲಿ, ಕಸದರಾಶಿಗಳಲ್ಲಿ ಎಲ್ಲೆಂದರಲ್ಲಿ ಬೀಳುತ್ತದೆ. ಹೀಗಾಗಿ ಇಂತಹ ಪಟಾಕಿಗಳನ್ನು ಸುಡಬೇಡಿ ಎಂದು ಹಿಂಜಾವೇ ಸಮಿತಿ ವಿನಂತಿಸಿಕೊಂಡಿದೆ.