ಮಂಗಳೂರು, ಸೆ.17 (DaijiworldNews/PY): ನಗರದ ದೇರೇಬೈಲ್ನ ಮಥುರಾ ವಸತಿ ಸಮುಚ್ಚಯದ ಉದ್ಘಾಟನೆಯನ್ನು ಸೆ.16ರ ಗುರುವಾರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಡೆಪ್ಯುಟಿ ಜನರಲ್ ಮ್ಯಾನೇಜರ್ ರಾಜೇಶ್ ಗುಪ್ತ ಅವರು ನೆರವೇರಿಸಿದರು.
ಉದ್ಘಾಟನೆಯ ಬಳಿಕ ಮಾತನಾಡಿದ ಅವರು, "ನಿರ್ಮಾಣ್ ಹೋಮ್ಸ್ ಸಂಸ್ಥೆಯು ಕಳೆದ ಹಲವು ವರ್ಷಗಳಿಂದ ಗ್ರಾಹಕರಿಗೆ ಅತ್ಯುತ್ತಮ ಸೇವೆ ಹಾಗೂ ಎಲ್ಲಾ ವರ್ಗದ ಜನರಿಗೆ ಕೈಗೆಟಕುವ ಬೆಲೆಯಲ್ಲಿ ಮನೆಗಳನ್ನು ನೀಡುತ್ತಾ ಬಂದಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ನಿರ್ಮಾಣ್ ಹೋಮ್ಸ್ ಉತ್ತಮವಾದ ಬೆಸುಗೆಯನ್ನು ಹೊಂದಿದ್ದು, ಮಥುರಾ ವಸತಿ ಸಮುಚ್ಚಯದ ಶೇ.75ರಷ್ಟು ಮನೆಗಳಿಗೆ ಎಸ್ಬಿಐ ಗೃಹ ಸಾಲವನ್ನು ಒದಗಿಸಿದೆ. ಇದೀಗ ಮಥುರಾ ವಸತಿ ಸಮುಚ್ಚಯ ಎಲ್ಲರ ಅಪೇಕ್ಷೆಗೂ ಮೀರಿ ಉತ್ತಮ ಸೌಕರ್ಯಗಳೊಂದಿಗೆ ಉದ್ಘಾಟನೆಗೊಂಡಿದೆ" ಎಂದು ಶುಭ ಹಾರೈಸಿದ್ದಾರೆ.
ಚಾರ್ಟೆಡ್ ಅಕೌಂಟೆಂಟ್ಕೇಶವ ಬಳ್ಳುಕರಾಯ ಮಾತನಾಡಿ, "ಈ ಯೋಜನೆಯು ಸಾಮಾನ್ಯ ವರ್ಗದ ಜನರಿಗೆ ಕೈಗೆಟಕುವ ಬೆಲೆಯಲ್ಲಿ ಲಭಿಸಿದ್ದು, ಪೂರ್ಣವಾದ ಮೂಲ ಸೌಕರ್ಯಗಳನ್ನು ಹೊಂದಿದೆ. ಕೊರೊನಾ ಕಾಲಘಟದ ಹೊರತಾಗಿಯೂ ನಿರ್ಮಾಣ್ ಹೋಮ್ಸ್ ಸಂಸ್ಥೆಯು ಮಥುರಾವನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಿರುವುದು ಹೆಮ್ಮೆಯ ವಿಷಯ" ಎಂದು ಹೇಳಿದ್ದಾರೆ.
ದೇರೇಬೈಲ್ನ ಕಾರ್ಪೋರೇಟರ್ ರಂಜಿನಿ ಕೋಟ್ಯಾನ್ ಮಾತನಾಡಿ, "ಮಥುರಾ ವಸತಿ ಸಮುಚ್ಚಯದ ವಿನ್ಯಾಸ ಅತ್ಯುತ್ತಮವಾಗಿ ಮೂಡಿಬಂದಿದೆ. ಇದು ಮೂಲಭೂತ ಸೌಕರ್ಯಗಳಿಗೆ ಬಹಳ ಹತ್ತಿರದಲ್ಲಿದೆ. ಮುಂದಿನ ದಿನಗಳಲ್ಲಿ ನಿರ್ಮಾಣ್ ಹೋಮ್ಸ್ ಸಂಸ್ಥೆಯು ಜನ ಸಾಮಾನ್ಯರಿಗೆ ಇಂತಹ ಮತ್ತಷ್ಟು ವಸತಿ ಸಮುಚ್ಚಯವನ್ನು ನಿರ್ಮಿಸಲಿ" ಎಂದು ಶುಭಕೋರಿದ್ದಾರೆ.
ಈ ವೇಳೆ, ಮೊದಲ ಐದು ಗ್ರಾಹಕರಿಗೆ ಫ್ಲಾಟ್ನ ಕೀಲಿಕೈಯನ್ನು ಹಸ್ತಾಂತರಿಸಲಾಯಿತು.
ನಿರ್ಮಾಣ್ ಹೋಮ್ಸ್ನ ಪಾಲುದಾರ ಕೃಷ್ಣರಾಜ್ ಸಾಲ್ಯಾನ್ ಸ್ವಾಗತಿಸಿದರು. ಭೂ ಮಾಲಕ ಸೂರಜ್ ಕೋಟ್ಯಾನ್ ವಂದಿಸಿದರು. ಸಮಾರಂಭದಲ್ಲಿ ನಿರ್ಮಾಣ್ ಹೋಮ್ಸ್ನ ಪಾಲುದಾರರಾದ ಗುರುದತ್ತ ಶೆಣೈ, ಮಂಗಲ್ ದೀಪ್, ಮಹೇಶ್ ಶೆಟ್ಟಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಉರ್ವಾಸ್ಟೋರ್ನಲ್ಲಿ ಶೀಘ್ರವೇ ಮಂದಾರ ಎಕ್ಸೆಲೆನ್ಸಿ ವಸತಿ ಸಮುಚ್ಚಯ:
ನಗರ ಉರ್ವಾಸ್ಟೋರ್ನಲ್ಲಿ ಮಂದಾರ ಎಕ್ಸೆಲೆನ್ಸಿ ಎನ್ನುವ ವಸತಿ ಸಮುಚ್ಚಯವನ್ನು ಜನತೆಗೆ ಶೀಘ್ರವೇ ಪರಿಚಯಿಸಲಿದ್ದಾರೆ. ವಸತಿ ಸಮುಚ್ಚಯದಲ್ಲಿ 670 685 ಹಾಗೂ 750 ಚ. ಅಡಿಯ (1ಬಿಹೆಚ್ಕೆ) 1000-1230 ಚ. ಅಡಿಯ (2ಬಿಹೆಚ್ಕೆ) ಹಾಗೂ 1480-1745 ಚ. ಅಡಿಯ (3ಬಿಹೆಚ್ಕೆ) ಫ್ಲಾಟ್ಗಳು ನಿರ್ಮಾಣಗೊಳ್ಳಲಿದೆ. ಈ ಅಪಾರ್ಟ್ಮೆಂಟ್ನ ವಿಶೇಷತೆ ಎಂದರೆ, ಮಂಗಳೂರಿನಲ್ಲೇ ಪ್ರಪ್ರಥಮ ಬಾರಿಗೆ ಮೂರು ರೀತಿಯ ನೀರಿನ ಮೂಲವನ್ನು( ಬಾವಿ, ಕಾರ್ಪೋರೇಷನ್, ಬೋರ್ವೆಲ್) ಹಾಗೂ ಎಲೆಕ್ಟ್ರಿಕ್ ಕಾರ್ ಚಾರ್ಜಿಂಗ್ ಪಾಯಿಂಟ್ ಹೊಂದಲಿದೆ. ಇದರೊಂದಿಗೆ ಮಿನಿ ಥಿಯೇಟರ್, ಹವಾನಿಯಂತ್ರಿತ ಜಿಮ್ನಾಷಿಯಮ್, ಒಳಾಂಗಣ ಆಟದ ತಾಣ, ಮಕ್ಕಳ ಆಟದ ತಾಣ, ಲೈಬ್ರೇರಿ, ಇಂಟರ್ಕಾಮ್ ಹಾಗೂ ಆಕ್ಸೆಸ್ ಕಂಟ್ರೋಲ್ಡ್ ಲಾಬಿ ಎಂಟ್ರೆನ್ಸ್, ಸೋಲಾರ್ ಲೈಟ್ಸ್, ಸಿಸಿ ಟಿವಿ ಕ್ಯಾಮರಾ, ಮೂರು ಸ್ವಯಂಚಾಲಿಕ ಲಿಫ್ಟ್, ಕಾರು ಪಾರ್ಕಿಂಗ್ ಹಾಗೂ ಜನರೇಟರ್ ವ್ಯವಸ್ಥೆಗಳಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಮಂದಾರ ಎಕ್ಸೆಲೆನ್ಸಿ ವಸತಿ ಸಮುಚ್ಚಯವನ್ನು ಮುಂದಿನ ಪೀಳಿಗೆಯ ಜನಾಂಗದ ಅಗತ್ಯಕ್ಕೆ ಅನುಗುಣವಾಗಿ ರಚಿಸಲಾಗಿದೆ. ಮಂಗಳೂರಿನಲ್ಲಿಯೇ ಪ್ರಪ್ರಥಮ ಬಾರಿಗೆ ಎಲೆಕ್ಟ್ರಿಕಲ್ ಕಾರ್ ಚಾರ್ಜಿಂಗ್ ಪಾಯಿಂಟ್ ಹಾಗೂ ನೀರಿನ ಕೊರತೆ ನೀಗಿಸಲು ಮೂರು ವಿಧದ ನೀರಿನ ಮೂಲವನ್ನು ಒದಗಿಸಲಾಗುವುದು. ಅಲ್ಲದೇ ಮನೋರಂಜನೆಗಾಗಿ ಮಿನಿ ಥಿಯೇಟರ್, ಹವಾನಿಯಂತ್ರಿತ ಜಿಮ್ನಾಷಿಯಮ್ ಹಾಗೂ ಇನ್ನಿತರ ಹಲವು ಸೌಕರ್ಯಗಳನ್ನು ಇಲ್ಲಿ ನೀಡಲಾಗುವುದು ಎಂದು ನಿರ್ಮಾಣ್ ಹೋಮ್ಸ್ ಸಂಸ್ಥೆಯ ಆಡಳಿತ ಪಾಲುದಾರ ಕೃಷ್ಣರಾಜ್ ಸಾಲ್ಯಾನ್ ತಿಳಿಸಿದ್ದಾರೆ.
ಗ್ರಾಹಕರು ಹೆಚ್ಚಿನ ಮಾಹಿತಿಗಾಗಿ ನಗರದ ಕಾಪಿಕಾಡ್ನ ಸುಪ್ರಭಾತ ಬಿಲ್ಡಿಂಗ್ನ 4ನೇ ಮಹಡಿಯಲ್ಲಿರುವ ನಿರ್ಮಾಣ್ ಹೋಮ್ಸ್ ಕಛೇರಿಯನ್ನು ಸಂಪರ್ಕಿಸಬಹುದು ಅಥವಾ www.nirmaanhomes.inಗೆ ಲಾಗದದದದ ಆನ್ ಆಗಬಹುದು.