ಉಡುಪಿ, ನ06(SS): ರಾಜ್ಯ ಸರ್ಕಾರದ ಮಾನಸಿಕತೆ ವಿಚಿತ್ರವಾಗಿದ್ದು, ಅಲ್ಪಸಂಖ್ಯಾತರ ಮತ ಪಡೆಯಲು ಟಿಪ್ಪು ಜಯಂತಿಯ ನಾಟಕವಾಡುತ್ತಿದೆ. ಹಾಗಾಗಿ ಟಿಪ್ಪು ಜಯಂತಿ ಆಮಂತ್ರಣದಲ್ಲಿ ನನ್ನ ಹೆಸರು ಪ್ರಕಟಿಸಬೇಡಿ ಎಂದು ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಪ್ಪು ಜಯಂತಿ ಆಚರಿಸದೇ ಇದ್ದರೆ ಮಾಜಿ ಸಿಎಂ ಸಿದ್ದರಾಮಯ್ಯ ಬೆಂಬಲವನ್ನು ವಾಪಸ್ ಪಡೆಯಬಹುದು ಎನ್ನುವ ಹೆದರಿಕೆ ಇದೆ. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಈ ಬಾರಿ ಟಿಪ್ಪು ಜಯಂತಿ ಆಚರಣೆಗೆ ಮುಂದಾಗಿದ್ದಾರೆ ಎಂದು ಹೇಳಿದರು.
ನಮ್ಮ ರಾಜ್ಯ ಸರ್ಕಾರದ ಮಾನಸಿಕತೆ ವಿಚಿತ್ರವಾಗಿದೆ. ಅಲ್ಪಸಂಖ್ಯಾತರ ಮತ ಪಡೆಯಲು ಟಿಪ್ಪು ಜಯಂತಿಯ ನಾಟಕ ಮಾಡುತ್ತಿದೆ. ಟಿಪ್ಪು ಜಯಂತಿ ಮಾಡದೇ ಇದ್ದರೆ ಸಿದ್ದರಾಮಯ್ಯ ಬೆಂಬಲ ಹಿಂದೆ ಪಡೆಯುತ್ತಾರೆ ಎಂಬ ಭಯ ಕುಮಾರಸ್ವಾಮಿಗೆ ಇದೆ. ಟಿಪ್ಪು ಜಯಂತಿ ಆಚರಣೆಗೆ ರಾಜ್ಯ ಬಿಜೆಪಿ ಸರ್ಕಾರದ ವಿರೋಧವಿದೆ. ಟಿಪ್ಪು ಜಯಂತಿ ಆಮಂತ್ರಣದಲ್ಲಿ ನನ್ನ ಹೆಸರು ಪ್ರಕಟಿಸಬೇಡಿ. ಆಮಂತ್ರಣ ಪತ್ರಿಕೆಯಲ್ಲಿ ಬಿಜೆಪಿ ನಾಯಕರ ಹೆಸರು ಬೇಡ ಎಂದು ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
ಟಿಪ್ಪು ಕ್ರೌರ್ಯದ ಸಂಕೇತ. ಟಿಪ್ಪು ಕನ್ನಡ ವಿರೋಧಿ. ಅವನ ಜಯಂತಿ ಮಾಡಿದರೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುತ್ತದೆ. ಸರಕಾರ ಟಿಪ್ಪು ಜಯಂತಿ ಕೈ ಬಿಡಬೇಕು. ಸಿದ್ದರಾಮಯ್ಯ ಸವಾಲು ಹಾಕಿ ಟಿಪ್ಪು ಜಯಂತಿ ಆಚರಿಸಿದ್ದಾರೆ. ಅದಕ್ಕಾಗಿ ಜನರು ಅವರನ್ನು ಚುನಾವಣೆಯಲ್ಲಿ ಅವರನ್ನು ತಿರಸ್ಕರಿಸಿದರು ಎಂದು ಹೇಳಿದ್ದಾರೆ.