ಮಂಗಳೂರು, ಸೆ 17 (DaijiworldNews/MS): ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆಯ ಧಾರಣೆಯ ನಾಗಲೋಟ ಮುಂದುವರಿದಿದ್ದು, ಗುರುವಾರ ಹೊರ ಮಾರುಕಟ್ಟೆಯಲ್ಲಿ ಕೆ.ಜಿ ಗೆ 505 ರೂ.ಗಳಿಗೆ ಖರೀದಿಯಾಗಿದೆ.
ಬೆಳ್ಳಾರೆಯಲ್ಲಿ ಗುರುವಾರ 505ಕ್ಕೆ ಖರೀದಿಯಾಗಿದೆ ಅಡಿಕೆ ಮಾರುಕಟ್ಟೆಯ ಇತಿಹಾಸದಲ್ಲೇ ದಾಖಲೆಯ ಧಾರಣೆ 500 ರೂಪಾಯಿಗಿಂತ ಹೆಚ್ಚಾಗಿರುವುದು ದಾಖಲೆಯಾಗಿದೆ. ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ 450 ರೂ. ದರವಿತ್ತು.
ಉತ್ತರ ಭಾರತದಲ್ಲಿ ಅಡಿಕೆಗೆ ಹೆಚ್ಚುತ್ತಿರುವ ಬೇಡಿಕೆಯೇ ಇದಕ್ಕೆ ಕಾರಣ ಎನ್ನಲಾಗಿದೆ. . ಇನ್ನಷ್ಟು ಬೆಲೆ ಏರಿಕೆಯ ನಿರೀಕ್ಷೆ ಹೊಂದಿರುವ ಬೆಳೆಗಾರರು ಉತ್ತಮ ಧಾರಣೆ ಬಂದರೂ ಹೊಸ ಅಡಿಕೆಯನ್ನು ಮಾರುಕಟ್ಟೆಗೆ ಬಿಡುತ್ತಿಲ್ಲ