ಮಂಗಳೂರು, ಸೆ. 16 (DaijiworldNews/SM): ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ 15,000 ಲೀಟರ್ ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಟ್ಯಾಂಕರ್ ಲಾರಿಯ ಟ್ಯಾಂಕ್ ಅನ್ನು ಗುರುವಾರದಂದು ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಘಟನೆ ಮರೋಲಿಯಲ್ಲಿರುವ ಯಮುನಾ ಅರ್ಥ್ ಮೂವರ್ಸ್ ಶೆಡ್ ನಲ್ಲಿ ನಡೆದಿದೆ.
ಯಾವುದೇ ಅನುಮತಿ ಇಲ್ಲದೆ ಸಂಗ್ರಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ. ಈ ನಿಟ್ಟಿನಲ್ಲಿ ಪೊಲೀಸರು ಒಬ್ಬ ವ್ಯಕ್ತಿಯನ್ನು ವಿಚಾರಣೆಗಾಗಿ ಕರೆದೊಯ್ದಿದ್ದಾರೆ. ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಯಮುನಾ ಅರ್ಥ್ ಮೂವರ್ಸ್ ಮಾಲೀಕರ ಮೇಲೆ ಪ್ರಕರಣ ದಾಖಲಾಗಿದೆ.