ಉಡುಪಿ, ನ 05 (MSP): ದೀಪಾವಳಿ ಹಬ್ಬದ ಪ್ರಯುಕ್ತ ಸುಡುಮದ್ದು ಮಾರಾಟ ಮತ್ತು ಸುಡುವ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವಂತೆ ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ತಿಳಿಸಿದ್ದಾರೆ. ಸುಡುಮದ್ದು ಅನಧಿಕೃತ ಮಾರಾಟ ಕಂಡು ಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಸುಡುಮದ್ದುಗಳ ಮೇಲೆ ಗುರುತಿಸಿದ ಸುರಕ್ಷತಾ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ಸುಡುಮದ್ದು ಉರಿಸಲು ಕ್ಯಾಂಡಲ್ ಅಗರಬತ್ತಿ ಉಪಯೋಗಿಸಬೇಕು. ಸುಡುಮದ್ದು ಹಚ್ಚುವ ಸ್ಥಳದಲ್ಲಿ ಕೈಗೆ ಸಿಗುವಂತೆ ಹತ್ತಿರದಲ್ಲಿ ಒಂದು ಬಕೆಟ್ ನೀರನ್ನು ಇಟ್ಟುಕೊಳ್ಳಬೇಕು.
ಅಪಾಯಕಾರಿ ಸುಡುಮದ್ದುಗಳನ್ನು ಸುರಕ್ಷಿತವಾಗಿ , ಕೆಳಗೆ ಬೀಳಬಹುದಾದ ಬಯಲಿನಲ್ಲಿ ಉಪಯೋಗಿಸಬೇಕು. ಎತ್ತರದ ತಡೆಗೊಡೆ. ಮರ ವಿದ್ಯುತ್ ತಂತಿ ಕೆಳಗೆ ಪಟಾಕಿ ಬಳಸಬಾರದು. ಸುಡುಮದ್ದುಗಳನ್ನು ಮನೆಯ ಒಳಗಡೆ ಹಾಗೂ ಸಾರ್ವಜನಿಕ ರಸ್ತೆಯಲ್ಲಿ ಬಳಸಬಾರದು. ಮಕ್ಕಳು ಪಟಾಕಿಗಳನ್ನು ಬಳಸುವಾಗ ಅವರ ಹತ್ತಿರ ಪಾಲಕರು ಇರಬೇಕು. ಸುಡುಮದ್ದುಗಳನ್ನು ಬಳಸುವಾಗ ರಾತ್ರಿ 8 ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ಸಿಡಿಸಬೇಕು ಎಂದು ಎಡಿಸಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.