ಬಂಟ್ವಾಳ ಅ 13 : ಬಿ.ಸಿ.ರೋಡ್ನಲ್ಲಿರುವ ಹಳೆ ತಾಲೂಕು ಪಂಚಾಯತ್ ಕಟ್ಟಡ ಸಹಿತ ಪಕ್ಕದ ವಾಣಿಜ್ಯ ಸಂಕೀರ್ಣವನ್ನು ತೆರವುಗೊಳಿಸುವ ಪ್ರಕ್ರಿಯೆಗೆ ಜಿಲ್ಲಾ ಪಂಚಾಯತ್ ನ್ಯಾಯಾಲಯ ತಾತ್ಕಾಲಿಕ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ. ಕಟ್ಟಡದಲ್ಲಿ ವ್ಯಾಪಾರ ನಡೆಸುವ ವಿವಿಧ ಅಂಗಡಿಯವರ ಪರವಾಗಿ ನ್ಯಾಯವಾದಿ ಪ್ರಸಾದ್ ಕುಮಾರ್ ರೈ ಅವರು ಜಿಪಂ ಅಧ್ಯಕ್ಷರ ನ್ಯಾಯಾಲಯದಲ್ಲಿ ಅಫೀಲು ದಾವೆ ಹೂಡಿದ್ದರು. ಬಂಟ್ವಾಳ ತಾಲೂಕು ಪಂಚಾಯತ್ 2017 ಎಪ್ರಿಲ್ 17 ರಂದು ನಡೆದ ಸಾಮಾನ್ಯ ಸಭೆಯಲ್ಲಿ ನಿರ್ಣಯ ಸಂಖ್ಯೆ 9(6) ರಂತೆ ತಾಲೂಕು ಪಂಚಾಯತ್ನ ಹಳೆಯ ಕಟ್ಟಡ ಜೊತೆಗೆ ಪಕ್ಕದ ಸದೃಢವಾದ ವಾಣಿಜ್ಯ ಸಂಕೀರ್ಣವನ್ನು ಕೂಡ ಕೆಡವಲು ನಿರ್ಣಯ ಕೈಗೊಂಡಿತ್ತು. ಈ ನಿರ್ಣಯದ ವಿರುದ್ಧ ಅವರು ಜಿಪಂ ಅಧ್ಯಕ್ಷರ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ಸಾರ್ವಜನಿಕರ ಹಣದಲ್ಲಿ ನಿರ್ಮಿಸಲಾದ ಸದೃಢ ಕಟ್ಟಡವನ್ನು ಕೆಡವಿ ಹಾಕುವುದು ಕಾನೂನು ಬಾಹಿರವಾಗಿದೆ ಎಂದು ತಮ್ಮ ದಾವೆಯಲ್ಲಿ ದೂರಿದ್ದರು.
.JPG)