ಮಂಗಳೂರು, ಸೆ14 (DaijiworldNews/MS): ನಿಫಾ ವೈರಸ್ ಶಂಕೆಯ ಹಿನ್ನೆಲೆಯಲ್ಲಿ ಕಾರವಾರ ಮೂಲದ ವ್ಯಕ್ತಿಯೊಬ್ಬರ ರಕ್ತದ ಮಾದರಿಯನ್ನು ಪುಣೆಯ ಎನ್ಐವಿ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.
ಗೋವಾದಲ್ಲಿ ಸಾಂಕ್ರಾಮಿಕ ರೋಗ ಪತ್ತೆ ಕಿಟ್ ತಯಾರಿಕಾ ಲ್ಯಾಬ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕೆಲಸ ಮಾಡುತ್ತಿರುವ ಕಾರವಾರ ಮೂಲದ ಮೈಕ್ರೋಬಯಾಲಜಿಸ್ಟ್, ಓರ್ವರು ಚೌತಿಯ ಹಿನ್ನಲೆಯಲ್ಲಿ ಊರಿಗೆ ಆಗಮಿಸಿದ್ದರು. ಅವರಲ್ಲಿ ಜ್ವರ ಕಾಣಿಸಿಕೊಂಡಿತ್ತು. ಇದರಿಂದ ಭಯಭೀತರಾದ ಅವರು ಸ್ವತಃ ನಿಫಾ ವೈರಸ್ ಟೆಸ್ಟ್ ಮಾಡುವಂತೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಆಗಮಿಸಿದ್ದಾರೆ. ಇದೀಗ ಅವರ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ
"ನಿಫಾ ವೈರಸ್ ಸೋಂಕಿಗೆ ತುತ್ತಾಗಿರುವ ಅನುಮಾನದಿಂದ ಅವರು ಸ್ವತಃ ನಿಫಾ ವೈರಸ್ ಮಾದರಿ ಟೆಸ್ಟ್ ಮಾಡುವಂತೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಆಗಮಿಸಿದ್ದಾರೆ . ಕೋವಿಡ್ ನೆಗೆಟಿವ್ ಬಂದಿದೆ. ಆದರೆ ನಿಫಾ ವೈರಸ್ ಬಗ್ಗೆ ಅವರಲ್ಲಿ ಸಂಶಯ ಉಂಟಾಗಿತ್ತು. ಹೀಗಾಗಿ ಅವರ ರಕ್ತ ಮಾದರಿಯನ್ನು ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳುಹಿಸಲಾಗಿದೆ. ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ. ವರದಿ ಇನ್ನು ಎರಡು ಮೂರು ದಿನದಲ್ಲಿ ಕೈ ಸೇರುವ ಸಾಧ್ಯತೆ ಇದ್ದು ಸದ್ಯ ಅವರನ್ನು ಐಸಲೋಟ್ ಮಾಡಲಾಗಿದೆ" ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಕಿಶೋರ್ ಕುಮಾರ್ ಹೇಳಿದ್ದಾರೆ.