ಕಾರ್ಕಳ, ಸೆ14 (DaijiworldNews/MS): ನಗರದ ಸ್ಟೇಟ್ಬ್ಯಾಂಕ್ ಇಂಡಿಯಾ ಬಳಿಯ ಮಹಾಲಸ ನಿವಾಸಿಯಾಗಿರುವ ದೇವಳವೊಂದರ ಅರ್ಚಕ ರವಳನಾಥ ಶರ್ಮ(32) ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾರೆ.
ಎಂಬಿಎ ಪದವೀದಾರರಾಗಿದ್ದ ಅವರು ಈ ಹಿಂದೆ ಕಾರ್ಕಳದ ಕಾಲೇಜುವೊಂದರಲ್ಲಿ ಅತಿಥಿ ಉಪನ್ಯಾಸಕರಾಗಿ ದುಡಿದಿದ್ದರು.
ಮೃತರು ತಂದೆ,ತಾಯಿ,ತಮ್ಮ,ಪತ್ನಿ ಹಾಗೂ ಪುತ್ರಿಯರನ್ನು ಅಗಲಿದ್ದಾರೆ.
ನಗರ ಠಾಣಾಧಿಕಾರಿ ಘಟನಾ ಸ್ಥಳಕ್ಕೆ ಅಗಮಿಸಿ ಮಹಜರು ನಡೆಸಿದ್ದಾರೆ. ಮಾನಸಿಕ ಖಿನ್ನತೆ ಘಟನೆಗೆ ಕಾರಣವೆನ್ನಲಾಗಿದೆ. ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಕೇಸುದಾಖಲಾಗಿದೆ.