ಮಂಗಳೂರು, ಸೆ. 13 (DaijiworldNews/SM): ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಯ ಫಲಿತಾಂಶ ಸೋಮವಾರ ಪ್ರಕಟಗೊಂಡಿದ್ದು, ಇದರಲ್ಲಿ ಮಂಗಳೂರಿನ ರುತ್ ಕ್ಲ್ಯಾರ್ ಡಿಸಿಲ್ವ ದೇಶಕ್ಕೆ ಪ್ರಥಮ ಶ್ರೇಣಿ ಪಡೆದುಕೊಳ್ಳುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ಇನ್ಸಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸಿದ ಪರೀಕ್ಷೆ ಇದಾಗಿದೆ. ಈ ಪರೀಕ್ಷೆಯಲ್ಲಿ ರುತ್ ಕ್ಲೇರ್ ಡಿ'ಸಿಲ್ವಾ ಜುಲೈನಲ್ಲಿ ನಡೆದ ಸಿಎ ಫೈನಲ್ ಪರೀಕ್ಷೆಗಳಲ್ಲಿ ಅಖಿಲ ಭಾರತ ಪ್ರಥಮ ರ್ಯಾಂಕ್ ಪಡೆದಿದ್ದಾರೆ.
ರುತ್ ಕ್ಲ್ಯಾರ್ ಡಿಸಿಲ್ವ, ರೋಸಿ ಮಾರಿಯಾ ಡಿ’ಸಿಲ್ವಾ ಮತ್ತು ರಫರ್ಟ್ ಡಿ’ಸಿಲ್ವಾ ದಂಪತಿಯ ಪುತ್ರಿಯಾಗಿದ್ದಾರೆ. ಸಿಎ ವಿವಿಯನ್ ಪಿಂಟೊ ಮತ್ತು ಕಂ, ಬಲ್ಮಠದಲ್ಲಿ ತನ್ನ ಸಿಎ ಪೂರ್ಣಗೊಳಿಸಿದ್ದಳು. ರೂತ್ ತನ್ನ ಶಾಲಾ ಶಿಕ್ಷಣವನ್ನು ಸೇಂಟ್ ಥೆರೇಸಾ ಶಾಲೆಯಲ್ಲಿ ಮತ್ತು ಪದವಿಪೂರ್ವ ಶಿಕ್ಷಣವನ್ನು ದೂರ ಶಿಕ್ಷಣದ ಮೂಲಕ ಮಂಗಳೂರು ವಿಶ್ವವಿದ್ಯಾನಿಲಯದಿಂದ ಮುಗಿಸಿದಳು.