ಬಳ್ಳಾರಿ, ನ 04 (MSP): ಕರ್ನಾಟಕ ಉಪ ಚುನಾವಣೆ ಕೊನೆಯಾಗಿದ್ದು, ಚುನಾವಣೆ ಸಂದರ್ಭ ಮತದಾನದ ಮಾಡಿ ಫೋಟೋ ಕ್ಲಿಕ್ಕಿಸಿ, ಪೊಲೀಸರ ಅತಿಥಿಯಾದ ಘಟನೆ ಬಳ್ಳಾರಿ ಮತ್ತು ಮಂಡ್ಯದಲ್ಲಿ ವರದಿಯಾಗಿದೆ.
ಬಳ್ಳಾರಿಯ ಹೊಸಪೇಟೆಯಲ್ಲಿ ಮತದಾನದ ಸಂದರ್ಭ ವ್ಯಕ್ತಿಯೋರ್ವ ಮತಗಟ್ಟೆಗೆ ಮೊಬೈಲ್ ತೆಗೆದುಕೊಂಡು ಪ್ರವೇಶಿಸಿದ್ದಲ್ಲದೆ, ಅದರ ಪೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ. ಈ ಘಟನೆ, ಬಳ್ಳಾರಿಯ ಮತಗಟ್ಟೆ ಸಂಖ್ಯೆ 62ರಲ್ಲಿ ನಡೆದಿದೆ. ಇವಿಎಂನಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ ಕುರಿತು ಸಾಕ್ಷಿಗಾಗಿ ರಜಾಕ್ ಫೋಟೋ ಸೆರೆಹಿಡಿದಿದ್ದ ಈತನನ್ನು ಇದೀಗ ಪೊಲೀಸರೇ ಸೆರೆಹಿಡಿದಿದ್ದಾರೆ. ಬಂಧಿತನನ್ನು ಬಳ್ಳಾರಿ ಮೂಲದ ರಜಾಕ್ ಎಂದು ಗುರುತಿಸಲಾಗಿದೆ.
ರಜಾಕ್ ಪೋಟೋ ಅಪ್ಲೋಡ್ ಮಾಡಿದ ಬಗ್ಗೆ ಮಾಹಿತಿ ಪಡೆದ ಚುನಾವಣಾಧಿಕಾರಿಗಳು ಬಳಿಕ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ, ಇದರಂತೆ ಪೊಲೀಸರು ರಜಾಕ್ ನನ್ನು ಬಂಧಿಸಿದ್ದಾರೆ. ರಹಸ್ಯ ಮತದಾನ ನಿಯಮ ಉಲ್ಲಂಘಿಸಿದ ಹಿನ್ನೆಲೆಯ ಆರೋಪದಲ್ಲಿ ರಜಾಕ್ ಬಂಧಿಸಲಾಗಿದೆ. ಇದಲ್ಲದೆ ನಿಯಮದಂತೆ ಮತಗಟ್ಟೆಯ ಒಳಗೆ ಮೊಬೈಲ್ ಬಳಕೆಗೆ ನಿಷೇಧವಿದೆ.
ಇನ್ನು ಮಂಡ್ಯದಲ್ಲೂ ಇದೇ ಮಾದರಿ ಘಟನೆ ವರದಿಯಾಗಿದ್ದು ಬಿಜೆಪಿ ಅಭ್ಯರ್ಥಿಗೆ ಮತ ಹಾಕಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ