ಕಾಸರಗೋಡು, ಸೆ.13 (DaijiworldNews/PY): ಮನೆಯ ಬೀಗ ಮುರಿದು ಚಿನ್ನಾಭರಣ ಕಳವು ಗೈದ ಘಟನೆ ನಗರ ಹೊರವಲಯದ ಚೌಕಿಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಚೌಕಿ ಆಜಾದ್ ನಗರ ರಸ್ತೆಯ ಅಬ್ದುಲ್ ರಹಮಾನ್ ಅವರ ಮನೆಯಲ್ಲಿ ಕಳ್ಳತನ ನಡೆದಿದೆ.
ಮನೆಯವರು ಬೀಗ ಜಡಿದು ಸಂಬಂಧಿಕರ ಮನೆಗೆ ತೆರಳಿದ್ದ ಸಂದರ್ಭದಲ್ಲಿ ಕೃತ್ಯ ನಡೆದಿದ್ದು, ಸೋಮವಾರ ಬೆಳಿಗ್ಗೆ ಮನೆಗೆ ತಲುಪಿದಾಗ ಕೃತ್ಯ ಬೆಳಕಿಗೆ ಬಂದಿದೆ.
ಮನೆಯ ಮುಂಬಾಗಿಲ ಬೀಗ ಮುರಿದು ಮೂರು ಲಕ್ಷ ರೂ. ನಗದು, ಚಿನ್ನದ ಉಂಗುರ ಹಾಗೂ ಬೆಲೆ ಬಾಳುವ ವಾಚ್ ಕಳವು ಮಾಡಲಾಗಿದೆ.
ಕಾಸರಗೋಡು ನಗರ ಠಾಣಾ ಪೊಲೀಸರು ಸ್ಥಳಕ್ಕಾಮಿಸಿ ತನಿಖೆ ನಡೆಸುತ್ತಿದ್ದಾರೆ.