ಮಂಗಳೂರು, ಸೆ.13 (DaijiworldNews/PY): ಅಕ್ರಮ ಚಿನ್ನ ಸಾಗಾಟ ಮಾಡುತ್ತಿದ್ದ ಪ್ರಯಾಣಿಕನ ವಿರುದ್ದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸೆ.12ರಂದು ದುಬೈನಿಂದ ಎಸ್ಜಿ 707ರ ಮೂಲಕ ಆಗಮಿಸಿದ ಪ್ರಯಾಣಿಕ ಎಗ್ ಬಾಯ್ಲರ್ ಮೂಲಕ ಸುಮಾರು 5,58,720 ಮೌಲ್ಯದ, 116.400 ಗ್ರಾಂ ಚಿನ್ನವನ್ನು ಸಾಗಿಸಲು ಯತ್ನಿಸಿದ್ದ.
ಪ್ರಯಾಣಿಕನ ವಿರುದ್ದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.