ಅಸ್ಸಾಂ, ನ 04 (MSP): ಇಬ್ಬರು ವ್ಯಕ್ತಿಯನ್ನು ಉಗ್ರರೆಂಬ ಶಂಕೆಯಲ್ಲಿ, ಜನರೇ ಹೊಡೆದು ಕೊಂದ ಘಟನೆ ಅಸ್ಸಾಂನಲ್ಲಿ ಅ. 03ರ ಶನಿವಾರ ನಡೆದಿದೆ.
ಅಸ್ಸಾಂನ ಸಿಲ್ವರ್ನ ಲಖಿಪುರ ಉಪವಿಭಾಗದ ಹರಿನಗರ ಎಂಬ ಮಾರ್ಕೆಟ್ ನಲ್ಲಿ ಈ ಘಟನೆ ನಡೆದಿದ್ದು, ಅಪಾರ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಮತ್ತು ಯುದ್ಧ ಸಾಮಗ್ರಿ ಹೊತ್ತೊಯ್ಯುತ್ತಿದ್ದ ಶಂಕಿತ ಉಗ್ರರನ್ನು ಅಡ್ಡಗಟ್ಟಿದ ಜನರು ಅವರಲ್ಲಿದ್ದಂತಹ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನೆಲ್ಲ ವಶಪಡಿಸಿಕೊಂಡು ಮನಬಂದಂತೆ ಥಳಿಸಿ, ಕೊಂದು ಹಾಕಿದ್ದಾರೆ.
ಐವರು ಶಂಕಿತ ಉಲ್ಫಾ ಉಗ್ರರ ಹತ್ಯೆ ವಿರೋಧಿಸಿ ಮುಷ್ಕಾರಕ್ಕೆ ಕರೆ ನೀಡಿದ್ದರಿಂದ ವಹಿವಾಟು ಇಲ್ಲದೆ ಮಾರುಕಟ್ಟೆ ಸ್ತಬ್ಧವಾಗಿತ್ತು. ಪ್ರತಿಭಟನಾ ನಿರತರಷ್ಟೇ ದಾರಿಗಳಲ್ಲಿ ಓಡಾಡುತ್ತಿದ್ದರು.ಇದೇ ವೇಳೆ ಬೆಳಗ್ಗೆ 11 ಗಂಟೆಯಷ್ಟೊತ್ತಿಗೆ ಇಬ್ಬರು ಸಂದೇಹಾಸ್ಪದ ವ್ಯಕ್ತಿಗಳು ದೊಡ್ಡ ಬ್ಯಾಗ್ನೊಂದಿಗೆ ನಡೆದು ಬರುತ್ತಿದ್ದರು. ಅವರನ್ನು ತಡೆದ ಜನರು ಬ್ಯಾಗ್ನಲ್ಲೇನಿದೆ ಎಂದು ನೋಡಿದ್ದಾರೆ. ಬಳಿಕ ಯಾರೆಂದು ವಿಚಾರಿಸಿ ಉಗ್ರರೆಂಬ ಶಂಕೆಯಲ್ಲಿ ಥಳಿಸಿ ಸಾಯಿಸಿದ್ದಾರೆ, ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.