ಉಳ್ಳಾಲ, ಸ.11 (DaijiworldNews/HR): ಲಸಿಕಾ ಶಿಬಿರ ಜನರಿಗೆ ಅಗತ್ಯವಾಗಿದೆ. ಆದರೆ ಇದನ್ನು ಸುಲಭದಲ್ಲಿ ಜನರ ಬಳಿ ತಲುಪಿಸುವ ಕಾರ್ಯವನ್ನು ಸಂಘಟನೆಗಳು ಮಾಡುತ್ತಿರುವುದು ಸ್ವಾಗತಾರ್ಹ. ಇಂತಹ ಕಾರ್ಯ ಯಶಸ್ವಿಯಾಗಿ ನಡೆಯಲಿ ಎಂದು ಖ್ಯಾತ ಎಲುಬು ತಜ್ಞ ಡಾ.ವಿಕ್ರಮ್ ಶೆಟ್ಟಿ ಅಭಿಪ್ರಾಯಪಟ್ಟರು.
ಲಯನ್ಸ್ ಕ್ಲಬ್ ಪೆರ್ಮನ್ನೂರು, ಫೋಕಸ್ ಸಂಸ್ಥೆ ಹಾಗೂ ರಿಚಲ್ ಚಾರಿಟೇಬಲ್ ಟ್ರಸ್ಟ್ ತೊಕ್ಕೊಟ್ಟು ಇದರ ಜಂಟಿ ಆಶ್ರಯದಲ್ಲಿ ದ.ಕ. ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆ, ಮತ್ತು ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರದ ಸಹಯೋಗದೊಂದಿಗೆ ಶಾಸಕ ಖಾದರ್ ಅವರ ಸಹಕಾರದಿಂದ ತೊಕ್ಕೊಟ್ಟು ಭಟ್ನಗರದಲ್ಲಿ ಶನಿವಾರ ನಡೆದ ಉಚಿತ ಕೋವಿಶೀಲ್ಡ್ ಲಸಿಕಾ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಉಳ್ಳಾಲ ನಗರಸಭಾ ಕೌನ್ಸಿಲರ್ ಗೀತಾ ಬಾಯಿ ಉದ್ಘಾಟಿಸಿದ್ದು, ಕಾಂಗ್ರೆಸ್ ಮುಖಂಡ ಸುರೇಶ್ ಭಟ್ನಗರ, ಡಾ.ರಾಜೇಶ್, ರೀಚಲ್ ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟೀ ಸಿರಿಲ್ ರಾಬರ್ಟ್ ಡಿಸೋಜ, ಲಯನ್ಸ್ ಕ್ಲಬ್ ಪೆರ್ಮನ್ನೂರು ಇದರ ಅಧ್ಯಕ್ಷ ಅರುಣ್ ಮೊಂತೆರೊ , ಜೆಸಿಐ ಮಂಗಳಗಂಗೋತ್ರಿ ಅಧ್ಯಕ್ಷ ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹಾ, ಮುನ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಲ್ಫ್ರೆಡ್ ಡಿ ಸೋಜ, ಲಯನ್ಸ್ ಪೆರ್ಮನ್ನೂರು ಘಟಕದ ಜಗದೀಶ್, ರೋಹನ್, ಪ್ರಕಾಶ್ ಪಿಂಟೋ, ಪ್ರಶಾಂತ್ ಮೊದಲಾದವರು ಉಪಸ್ಥಿತರಿದ್ದರು.