ಮಂಗಳೂರು, ಸೆ. 11 (DaijiworldNews/PY): ಮಂಗಳೂರು ನಗರ ಪಾಲಿಕೆ (ಮನಪಾ)ಗೆ ದೊರೆತ ದೂರುಗಳ ಆಧಾರದ ಮೇಲೆ ಸೆ.10ರಂದು ಅಧಿಕಾರಿಗಳು ನಗರದ ವಿವಿಧ ಭಾಗಗಳಲ್ಲಿರುವ ಮನರಂಜನಾ ಕ್ಲಬ್ಗಳ ಮೇಲೆ ಅನಿರೀಕ್ಷಿತ ದಾಳಿ ನಡೆಸಿದ್ದಾರೆ.
ಈ ಜಾಗಗಳಲ್ಲಿ ಜೂಜಾಟದಂತಹ ನಡೆಯುತ್ತಿದ್ದು, ಕೊರೊನಾ ಮಾರ್ಗಸೂಚಿಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿರುವುದು ಕಂಡುಬಂದಿದೆ.
ಪ್ರಸ್ತುತ, ದಾಳಿ ನಡೆಸಲಾದ ನಾಲ್ಕು ಸ್ಥಳಗಳನ್ನು ಮುಚ್ಚಲಾಗಿದ್ದು, ಈ ಬಗ್ಗೆ ಸುರತ್ಕಲ್, ಪಾಂಡೇಶ್ವರ ಹಾಗೂ ಬಂದರ್ನ ನಗರ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಾಂಕ್ರಾಮಿಕ ರೋಗಗಳ ಕಾಯ್ದೆ, ವಿಪತ್ತು ನಿರ್ವಹಣಾ ಕಾಯ್ದೆ ಹಾಗೂ ಕರ್ನಾಟಕ ಪೊಲೀಸ್ ಕಾಯ್ದೆಯ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.