ಕಾಸರಗೋಡು, ಸೆ. 10 (DaijiworldNews/PY): ಜಿಲ್ಲೆಯಲ್ಲಿ ಶುಕ್ರವಾರ 364 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಇದುವರೆಗೆ 1,28,763 ಮಂದಿಗೆ ಸೋಂಕು ದೃಢಪಟ್ಟಿದೆ.
ಈ ನಡುವೆ ಇಂದು 68 ಮಂದಿ ಗುಣಮುಖರಾಗಿದ್ದು, ಈವರೆಗೆ ಒಟ್ಟು 1,22,853 ಮಂದಿ ಗುಣಮುಖರಾಗಿದ್ದಾರೆ.
ಸದ್ಯ 4, 872 ಮಂದಿ ಚಿಕಿತ್ಸೆಯಲ್ಲಿದ್ದು, 19,169 ಮಂದಿ ನಿಗಾದಲ್ಲಿದ್ದಾರೆ.
ಕಳೆದ ಒಂದು ವಾರದಿಂದ ಸೋಂಕಿತರ ಪ್ರಮಾಣ ಇಳಿಕೆಯಾಗುತ್ತಿದ್ದು, ಸೋಂಕಿತರ ಪ್ರಮಾಣ 500ಕ್ಕಿಂತ ಇಳಿಕೆಯಾಗತೊಡಗಿದೆ.
ಕೇರಳದಲ್ಲಿ 25,010 ಮಂದಿಗೆ ಸೋಂಕು ದೃಢಪಟ್ಟಿದ್ದು, ಪಾಸಿಟಿವ್ ರೇಟ್ 16.53 ಕ್ಕೆ ಕುಸಿದಿದೆ.