ಮಂಗಳೂರು ಅ12: ರಾಜ್ಯದ ಇತರ ನಗರಗಳಿಗೆ ಹೋಲಿಸಿದರೆ ಮಂಗಳೂರಿನಲ್ಲಿ ಡ್ರಗ್ ಮಾಫಿಯಾ ಬೆಳವಣಿಗೆ ತುಂಬಾ ನಿಧಾನವಾಗಿದೆ. ಜಿಲ್ಲೆಯ ಪೋಲಿಸ್ ಸೇನೆಯು ಈ ಬೆಳವಣಿಗೆಯನ್ನು ಮಟ್ಟಹಾಕುವಲ್ಲಿ ಯಶಸ್ವಿಯಾಗಿದೆ ಹಾಗೂ ಗಾಂಜಾ ಹಾಗೂ ಇತರ ನಿಷೇಧಿತ ಮಾದಕ ವಸ್ತುಗಳ ಮಾರಟದ ತಡೆಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತಿದೆ.ಉಲ್ಲಾಲ ಮುಕ್ಕಚ್ಚೇರಿ ನಿವಾಸಿ ಜುಬೈರ್ ಹತ್ಯೆ ಪ್ರಕರಣವನ್ನು ಮುಂದಿಟ್ಟುಕೊಂಡು ಜಿಲ್ಲೆಯ ಲೋಕಸಭಾ ಸದಸ್ಯರು ದಿನಗಳ ಹಿಂದೆ ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಡ್ರಗ್ಸ್ ಮಾಫಿಯ ರಾರಾಜಿಸುತ್ತಿದೆ ಎಂದು ಮಾಡಿರುವ ಅರೋಪ ಸತ್ಯಕ್ಕೆ ದೂರವಾಗಿದೆ. ಬಿಜೆಪಿ ಸರಕಾರವು ಆಡಳಿತದಲ್ಲಿದ್ದಾಗ ಹೀಗೆ ಆಗಿದ್ದಾಗಿರಬಹುದು. ಅವರ ಮಾತುಗಳು ಅವರ ಸ್ವತ: ಅನುಭವವನ್ನು ಸೂಚಿಸುತ್ತವೆ ಎಂದು ರಾಜ್ಯ ಅರಣ್ಯ ಹಾಗೂ ಮಂಗಳೂರು ಉಸ್ತುವಾರಿ ಸಚಿವರು ಪ್ರತಿಕ್ರಿಯಿಸಿದ್ದಾರೆ.
ಮಂಗಳೂರಿನ ಸರ್ಕಿಟ್ ಹೌಸ್ ನಲ್ಲಿ ಪೋಲಿಸ್ ಅಧಿಕಾರಿಗಳ ಸಭೆಯ ನಂತರ ಪತ್ರಕರ್ತರನ್ನು ಉದ್ದೇಶಿಸಿ ಮಾತಾನಾಡಿದ ಅವರು " ನಿನ್ನೆ ಜಿಲ್ಲೆಯ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರನ್ನು ಹಾಗೂ ರಕ್ಷಕ ಶಿಕ್ಷಕ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ವಿಧ್ಯಾರ್ಥಿಗಳು ಡ್ರಗ್ಸ್ ಮಾಫಿಯಾದ ಬಲೆಗೆ ಬೀಳುವುದನ್ನು ತಡೆಹಿಡಿಯುವ ಬಗ್ಗೆ ಕೆಲವು ಮಹತ್ವದ ಸೂಚನೆಗಳನ್ನು ಅವರಿಗೆ ನೀಡಲಾಗಿದೆ. ಒಂದು ಗ್ರಾಂ ಗಾಂಜಾ ಪತ್ತೆಯಾದರೂ ಸಹ: ಅಂತಹವರ ವಿರುದ್ಧ ವಿಧ್ಯಾರ್ಥಿ ಎಂದು ಪರಿಗಣಿಸದೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಶಿಕ್ಷಣ ಸಂಸ್ಥೆಗಳ ಸಹಾಯವೂ ಇದಕ್ಕೆ ಅಗತ್ಯವಾಗಿದೆ." ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಡ್ರಗ್ಸ್ ಗೆ ಸಂಬಂಧಪಟ್ಟ ದೂರುಗಳನ್ನು ಪರಿಗಣಿಸಲು ಪ್ರತ್ಯೇಕ ಪೋಲಿಸ್ ಸ್ಟೇಷನ್ ನ ಸ್ಥಾಪನೆಯಾಗಿದೆ. ಇತ್ತೀಚೆಗೆ ಜಿಲ್ಲೆಯಲ್ಲಿ ನಡೆದ ಕೊಲೆಗಳು ಎಲ್ಲವೂ ಗಾಂಜಾ ಮಾರಟಕ್ಕೆ ಸಂಬಂಧಪಟ್ಟದೆಂದು ಹೇಳಲಾಗದು. ತನಿಖೆಯ ವೇಳೆ ಹೆಚ್ಚಿನ ಕೊಲೆಗಳ ಹಿಂದೆ ಹಳೆ ವೈಷಮ್ಯ ಹಾಗೂ ಖಾಸಾಗಿ ಹಗೆತನ ಕಂಡುಬಂದಿದೆ. ರೌಡಿಸಂ ನಿಗ್ರಹಿಸಲು ಪ್ರತ್ಯೇಕವಾದ ತಂಡಗಳನ್ನು ರಚಿಸಲಾಗಿದೆ. ಎಂದು ಅವರು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿ ನುಡಿದರು.