ಬಂಟ್ವಾಳ, ಸ. 08 (DaijiworldNews/HR): ಆಗ್ರಾರ್ ಚರ್ಚ್ನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಬಂಟ್ವಾಳ ತಾಲೂಕು ಮಟ್ಟದ ಅತ್ಯತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತರಾದ ಕು.ಓಡ್ರಿನ್ ಡಿಸೋಜ ಅವರಿಗೆ ಶಾಲಾ ಹಳೇ ವಿದ್ಯಾರ್ಥಿಗಳಿಂದ ಅಭಿನಂದನಾ ಸಮಾರಂಭ ನಡೆಯಿತು.
ಹಳೇವಿದ್ಯಾರ್ಥಿಗಳಾದ ಹರೀಶ್ ಕೋಟ್ಯಾನ್ ಕುದನೆ,ಮೆಲ್ವಿನ್ ಡೆ'ಸಾ,ಆಹ್ಮದ್ ಬಾವಾ ಬಂಟ್ವಾಳ ಅವರು ಶಿಕ್ಷಕಿ ಓಡ್ವಿನ್ ಡಿಸೋಜ ಅವರ ಕಾರ್ಯವನ್ನು ಶ್ಲಾಘಿಸಿ ಅಭಿನಂದಿಸಿ ಸ್ಮರಣಿಕೆಯನ್ನಿತ್ತು ಗೌರವಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಲಾ ಸಂಚಾಲಕರು,ಚರ್ಚ್ನ ಧರ್ಮಗುರು ವಂ.ಫಾ.ಪೀಟರ್ ಡಿಸೋಜ ಅವರು ಶಿಕ್ಷಕಿ ಓಡಿನ್ ಡಿಸೋಜ ಅವರು ಅತ್ಯತ್ತಮ ಶಿಕ್ಷಕಿ ಪ್ರಶಸ್ತಿಗೆ ಭಾಜನರಾಗುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ ಎಂದು ಅಭಿನಂದಿಸಿದರು.
ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ವಿನ್ಸೆಂಟ್ ಕಾರ್ಲೋ, ಹಳೇ ವಿದ್ಯಾರ್ಥಿಗಳಾದ ದಯಾನಂದ ನೇರಂಬೋಳು, ಮನೋಹರ್ ನೇರಂಬೋಳ್, ಪ್ರಭಾಕರ ಪೂಜಾರಿ, ಗಣೇಶ್ ಪೂಜಾರಿ ನೇರಂಬೋಳು, ಜಯಂತ ನೇರಂಬೋಳು ಹಾಗೂ ಶಾಲಾ ಶಿಕ್ಷಕ, ಶಿಕ್ಷಕಿಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು.