ಬಂಟ್ವಾಳ, ಅ 12: ಕಾಂಗ್ರೆಸ್ ಸರ್ಕಾರ ಮನೆ ಇಲ್ಲದವರಿಗೆ ಕನಿಷ್ಟ ಸೂರು ನೀಡಿ ಆಶ್ರಯ ನೀಡಿದೆ. ಉಳುವವನೆ ಹೊಲದೊಡೆಯ ಎನ್ನುವ ಕಾನೂನಿನ ಮೂಲಕ ಬಡವರಿಗೆ ಜಮೀನು ನೀಡಿದ್ದು ಕಾಂಗ್ರೆಸ್ ಸರಕಾರ ಎಂದು ಉಸ್ತುವಾರಿ ಸಚಿವ ಬಿ.ರಮನಾಥ ರೈ ಹೇಳಿದರು.
ಅವರು ಜಿಲ್ಲಾ ಕಿಸಾನ್ ಘಟಕದ ವತಿಯಿಂದ ಬಿ.ಸಿ ರೋಡಿನಲ್ಲಿ ಕೇಂದ್ರ ಸರಕಾರದ ರೈತ ವಿರೋಧಿ ನೀತಿಯ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಪ್ರಸ್ತುತ 24 ಸಿ ಯ ಮೂಲಕ ಬಂಟ್ವಾಳದಲ್ಲಿ ಸಾವಿರಾರು ಕುಟುಂಬಗಳಿಗೆ ಜಮೀನು ನೀಡಲಾಗಿದ್ದು, ಅನೇಕ ಬಡವರಿಗೆ ಕಾಂಗ್ರೆಸ್ ಸರಕಾರ ದಾರಿದೀಪವಾಗಿದೆ ಎಂದು ತಿಳಿಸಿದರು.
ರೈತ ಕಿಸಾನ್ ರಾಜ್ಯ ಅದ್ಯಕ್ಷ ಸಚಿನ್ ಇದೇ ವೇಳೆ ಮಾತನಾಡಿ, ನಕಲಿ ಹಿಂದುತ್ವದ ಮೂಲಕ ರಾಮ ಮಂದಿರ ನಿರ್ಮಾಣ ಮಾಡಲು ಹೊರಟಿದ್ದಾರೆ. ಮತೀಯ ಭಾವನೆಗಳನ್ನು ಕೆರಳಿಸಿ ಅಧಿಕಾರ ಪಡೆಯುತ್ತಿದ್ದಾರೆ ಎಂದು ಆರೋಪ ವ್ಯಕ್ತಪಡಿಸಿದರು.