ಮಂಗಳೂರು, ಸೆ 8 (DaijiworldNews/MS): ಡ್ರಗ್ ಕೇಸ್ ವಿಚಾರಕ್ಕೆ ಸಂಬಂಧಪಟ್ಟಂತೆ ಸ್ಯಾಂಡಲ್ವುಡ್ನ ಖ್ಯಾತ ಆ್ಯಂಕರ್ ಹಾಗೂ ನಟಿ ಅನುಶ್ರೀ ಅವರ ಹೆಸರು ಚಾರ್ಜ್ ಶೀಟ್’ ನಲ್ಲಿ ಉಲ್ಲೇಖ ಮಾಡಲಾಗಿದೆ ಎಂದು ವರದಿಯಾಗಿದೆ. ಮಂಗಳೂರು ಸಿಸಿಬಿ ಪೊಲೀಸರು ಸಲ್ಲಿಸಿರುವ ಚಾರ್ಜ್ಶೀಟ್ನಲ್ಲಿ ಅನುಶ್ರೀ ಹೆಸರು ಉಲ್ಲೇಖ ಮಾಡಲಾಗಿದೆ.
ಆಂಕರ್ ಅನುಶ್ರೀ ಡ್ರಗ್ಸ್ ಸೇವನೆ ಜತೆಗೆ ಅದರ ಸಾಗಾಟ ಮಾಡುತ್ತಿದ್ದರು ಎಂದು ಪ್ರಕರಣದ ಎ2 ಆರೋಪಿಯಾಗಿರುವ ಕಿಶೋರ್ ಅಮನ್ ಶೆಟ್ಟಿ ಹೇಳಿಕೆಯನ್ನು ಆಧಾರಿಸಿ ಚಾರ್ಜ್ ಶೀಟ್ ನಲ್ಲಿ ಹೆಸರು ಉಲ್ಲೇಖಿಸಲಾಗಿದೆ. ಕಿಶೋರ್ ಶೆಟ್ಟಿ ನೀಡಿರುವ ಹೇಳಿಕೆಯಂತೆ, ಅವರ ರೂಮ್ಗೆ ಅನುಶ್ರೀ ಎಕ್ಟಸಿ ಡ್ರಗ್ಸ್ ತರುತ್ತಿದ್ದರು. ಕಿಶೋರ್, ತರುಣ್ ಜೊತೆ ಸಾಕಷ್ಟು ಬಾರಿ ಅನುಶ್ರೀ ಕೂಡ ಡ್ರಗ್ಸ್ ಸೇವನೆ ಮಾಡಿದ್ದರು ಎಂದು ಹೇಳಿಕೆದಾಖಲಿಸಲಾಗಿದೆ.
‘2007-08ರ ಸಮಯದಲ್ಲಿ ರಿಯಾಲಿಟಿ ಶೋಗೆ ಸಂಬಂಧಪಟ್ಟಂತೆ ತರುಣ್ ರೂಮ್ನಲ್ಲಿ ಅನುಶ್ರೀಗೆ ಡ್ಯಾನ್ಸ್ ಪ್ರಾಕ್ಟೀಸ್ ಮಾಡಿಸುವಾಗ ಅನುಶ್ರೀ ಎಕ್ಸ್ಟಸಿ ಡ್ರಗ್ಸ್ ಖರೀದಿಸಿ ತರುತ್ತಿದ್ದರು. ನಮಗೆ ಎಕ್ಸ್ಟಸಿ ಡ್ರಗ್ಸ್ ನೀಡಿ ಅನುಶ್ರೀ ಕೂಡ ಊಟದ ಮೊದಲು ಸೇವಿಸುತ್ತಿದ್ದರು ಎಂದು ಹೇಳಿದ್ದಾರೆ. ಆರೋಪಿ ಕಿಶೋರ್ ಹೇಳಿಕೆಯಿಂದ ಪ್ರಕರಣ ಮತ್ತಷ್ಟು ಮಹತ್ವ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸರು ಆರೋಪ ಪಟ್ಟಿಯಲ್ಲಿ ಅನುಶ್ರೀ ಹೆಸರು ಉಲ್ಲೇಖ ಮಾಡಿದ್ದಾರೆ. ಈ ಮೂಲಕ ಅನುಶ್ರೀ ಮತ್ತೆ ಡ್ರಗ್ ಕಂಟಕ ಎದುರಾಗಿದೆ.