ಉಳ್ಳಾಲ, ಸೆ. 07 (DaijiworldNews/SM): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಫಾ ಅಲರ್ಟ್ ಹಿನ್ನಲೆಯಲ್ಲಿ ಕೇರಳ ಗಡಿಭಾಗ ತಲಪಾಡಿಯಲ್ಲಿ ತಪಾಸಣೆಯನ್ನು ಜಿಲ್ಲಾಡಳಿತ ಇಂದಿನಿಂದ ಚುರುಕುಗೊಳಿಸಿದೆ.
ಕೇರಳದಿಂದ ಬರುವವರಿಗೆ ಕೊರೊನ ನೆಗೆಟಿವ್ ಸರ್ಟಿಫಿಕೇಟ್ ಪರಿಶೀಲನೆ ನಡೆಸುವಾಗ ನಿಫಾ ರೋಗದ ಲಕ್ಷಣಗಳು ಇರುವ ಕುರಿತು ಆರೋಗ್ಯ ಇಲಾಖೆ ಪರಿಶೀಲನೆ ಆರಂಭಿಸಿದೆ. ನಿಫಾ ರೋಗ ಲಕ್ಷಣ ಇರುವವರ ಸಂಪರ್ಕ ನಡೆಸಿರುವ ಕುರಿತು ವಿಚಾರಣೆಯನ್ನು ನಡೆಸಲಾಗುತ್ತಿದೆ. ಕೇರಳ ಭಾಗದಿಂದ ಬರುವ ಹಣ್ಣಿನಿಂದ ವೈರಾಣು ಹರಡುವ ಸಾಧ್ಯತೆಗಳಿರುವುದರಿಂದ ಅಲ್ಲಿಂದ ಸರಬರಾಜಾಗುವ ಹಣ್ಣುಗಳ ಮೇಲೂ ನಿಗಾ ಇರಿಸಲಾಗಿದೆ.
ರಾಂಬುಟನ್, ಡ್ರಾಗನ್ ಹಣ್ಣುಗಳ ಮೇಲೆ ವಿಶೇಷ ನಿಗಾ ಇರಿಸಲಾಗಿದೆ. ಸದ್ಯ ನಿಫಾ ರೋಗ ಲಕ್ಷಣ ಪತ್ತೆಗಾಗಿ ಥರ್ಮಲ್ ಸ್ಕ್ಯಾನಿಂಗ್ ಅನ್ನು ಆರಂಭಿಸಲಾಗಿದೆ. ಆದರೆ, ಟೆಕ್ನಿಕಲ್ ಆಗಿ ಯಾವುದೇ ತಪಾಸಣೆ ಇಲ್ಲ. ಅದನ್ನು ಕೂಡ ಆರೋಗ್ಯ ಇಲಾಖೆ ವ್ಯವಸ್ಥೆ ಮಾಡುತ್ತದೆ. ಪ್ರಸ್ತುತ ಥರ್ಮಲ್ ಸ್ಯಾನಿಂಗ್ ಆರಂಭಿಸುತ್ತೇವೆ. ನಿಫಾ ರೋಗ ಲಕ್ಷಣ ಇದ್ದವರನ್ನು ವಾಪಾಸ್ ಕಳಿಹಿಸುತ್ತೇವೆ.
ಕೋವಿಡ್ ನೆಗೆಟಿವ್ ರಿಪೋರ್ಟ್ ಇದ್ದು ಟೆಂಪರೇಚರ್ ಜಾಸ್ತಿ ಬಂದ್ರು ವಾಪಾಸ್ ಕಳುಹಿಸಲಾಗುತ್ತಿದೆ ಎಂದು ತಲಪಾಡಿ ಗಡಿಯಲ್ಲಿ ತಪಾಸಣೆಯಲ್ಲಿ ಭಾಗವಹಿಸಿದ್ದ ಸಹಾಯಕ ಪೊಲೀಸ್ ಆಯುಕ್ತ ರಂಜಿತ್ ಬಂಡಾರು ತಿಳಿಸಿದರು.