ಬಂಟ್ವಾಳ, ಸ.06 (DaijiworldNews/HR): ನಕಲಿ ಫೇಸ್ಬುಕ್ ಖಾತೆ ತೆರೆದು ಮಹಿಳೆಯೊಬ್ಬರಿಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಯನ್ನು ಬಜ್ಪೆ ಕೈಕಂಬ ನಿವಾಸಿ ಮಹಮ್ಮದ್ ಅಲಿ ಎಂದು ಗುರುತಿಸಲಾಗಿದೆ.
ಅನಿಲ್ ಶೆಟ್ಟಿ ಎನ್ನುವ ಹೆಸರಿನಲ್ಲಿ ಫೇಸ್ಬುಕ್ನಲ್ಲಿ ನಕಲಿ ಖಾತೆ ತೆರೆದಿರುವ ಮಹಮ್ಮದ್ ಅಲಿ, ಮಹಿಳೆಗೆ ಆಶ್ಲೀಲ ಚಿತ್ರ ಕಳುಹಿಸುತ್ತಿದ್ದ ಜತೆಗೆ ಅಸಭ್ಯವಾಗಿ ಮಾತನಾಡುತ್ತಿದ್ದ ಎಂದು ಬಂಟ್ವಾಳ ನಿವಾಸಿಯಾಗಿರುವ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ನಕಲಿ ಖಾತೆ ತೆರೆದು ಮಹಮ್ಮದ್ ಹಲವಾರು ಮಹಿಳೆಯರಿಗೆ ಕಿರುಕುಳ ನೀಡಿತ್ತಿರುವ ಆರೋಪವಿದೆ.