ಮಂಗಳೂರು, ಸ.06 (DaijiworldNews/HR): ಶ್ರೀಲಂಕಾದ ಸಿಂಹಳಿ ಭಾಷೆಯ 'ಮನಿಕೆ ಮಗೆ ಹಿತೆ' ಎಂಬ ಜನಪ್ರಿಯತೆ ಹಾಡಿಗೆ ಮೂಡಬಿದಿರೆ ಆಳ್ವಾಸ್ ಕಾಲೇಜಿನ ದ್ವಿತೀಯ ಪತ್ರಿಕೋದ್ಯಮ ಪದವಿ ವಿದ್ಯಾರ್ಥಿನಿ ಅಸೀಮಾ ದೋಳ ಅವರು ರ್ಯಾಪ್ ಟಚ್ ನೀಡಿದ್ದು, ಇದೀಗ ಶ್ರೀಲಂಕಾ ಸೇರಿದಂತೆ ಎಲ್ಲೆಡೆ ವೈರಲ್ ಆಗಿದೆ.
ಸೆ.3ರಂದು ಅಸೀಮಾ ದೋಳ ಅಫೀಶಿಯಲ್ ಯೂಟ್ಯೂಬ್ ಚಾನೆಲ್ನಲ್ಲಿ ಈ ರ್ಯಾಪ್ ಹಾಡನ್ನು ಅಪ್ಲೋಡ್ ಮಾಡಿದ್ದಾರೆ. ಅಪ್ಲೋಡ್ ಮಾಡಿದ ಕೆಲವೇ ಗಂಟೆಗಳಲ್ಲಿ ಈ ಹಾಡು ಭಾರೀ ವೈರಲ್ ಆಗಿದೆ.
ಇನ್ನು ಈ ಹಾಡನ್ನು ಸುಮಾರು 12 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, ಇದರ ಒರಿಜಿನಲ್ ಕವರ್ ಹಾಡನ್ನು ಯೊಹಾನಿ ಹಾಗೂ ಸತೀಶನ್ ಹಾಡಿದ್ದು, 80 ಮಿಲಿಯನ್
ಮಂದಿ ವೀಕ್ಷಿಸಿದ್ದರು.
ಶ್ರೀಲಂಕಾ ಭಾಷೆಯ ಈ ಹಾಡನ್ನು ಅಲ್ಲಿನ ಭಾಷೆಯಲ್ಲಿ ರ್ಯಾಪ್ ಆಗಿ ಹಾಡಿದ ಪ್ರಥಮ ಭಾರತೀಯ ಸಿಂಗರ್ ಎನಿಸಿಕೊಂಡಿದ್ದಾರೆ ಅಸೀಮಾ ದೋಳ.
ಇನ್ನು ಶ್ರೀಲಂಕಾ ಭಾಷೆಯಲ್ಲಿ ಮನಿಕೆ ಮಗೆ ಹಿತೆ ಎಂದರೆ ಮನಸ್ಸಿಗೆ ಹತ್ತಿರವಾದವಳು ಎಂದು ಅರ್ಥ. ಈ ಹಾಡಿನ ಅರ್ಥವನ್ನು ತಿಳಿದುಕೊಂಡ ಅಸೀಮಾ ಈ ಹಾಡಿಗೆ ರ್ಯಾಪ್ ಟಚ್ ನೀಡಿ ಸೈ ಎನಿಸಿಕೊಂಡಿದ್ದಾರೆ.