ಮಂಗಳೂರು, ಸೆ 06 (DaijiworldNews/MS): ರಾಜ್ಯದಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಬರುತ್ತಿದ್ದಂತೆ ಶಾಲಾರಂಭಕ್ಕೆ ಚಿಂತನೆ ನಡೆಸಲಾಗಿದ್ದು, ಬಹುತೇಕ ಜಿಲ್ಲೆಗಳಲ್ಲಿ ಸೋಮವಾರ 6 ರಿಂದ 8 ನೇ ತರಗತಿಗಳು ಆರಂಭವಾಗಲಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಆರಂಭವಾಗಿದ್ದರೂ 6 ರಿಂದ 8 ನೇ ತರಗತಿ ಆರಂಭವಾಗುವುದಿಲ್ಲ . ಉಡುಪಿ ಜಿಲ್ಲೆಯಾದ್ಯಂತ 6 ರಿಂದ 8ನೇ ತರಗತಿಗಳು ಆರಂಭವಾಗಲಿದೆ.
ದ್ವಿತಿಯ ಪಿಯುಸಿ ಭೌತಿಕ ತರಗತಿ ಆರಂಭವಾಗಿದ್ದರೂ ಉಳಿದ ತರಗತಿ ಆರಂಭದ ಬಗ್ಗೆ ದ.ಕ. ಜಿಲ್ಲಾಡಳಿತ ಇನ್ನೂ ಅಂತಿಮ ತೀರ್ಮಾನ ಮಾಡಿಲ್ಲ. ಹೀಗಾಗಿ ಸೆ.6 ರಿಂದ 8ನೇ ತರಗತಿ ವರೆಗೆ ರಾಜ್ಯ ಸರ್ಕಾರ ಅನುಮತಿ ನೀಡಿದ್ದರೂ ಇದು ದ. ಕ ಜಿಲ್ಲೆಗೆ ಅನ್ವಯವಾಗುವುದಿಲ್ಲ. ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಕಡಿಮೆ ಆದ ಬಳಿಕ ಜಿಲ್ಲಾಡಳಿತ ಶೀಘ್ರವೇ ಸಭೆ ನಡೆಸಿ ಶಾಲಾರಂಭದ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ಇನ್ನು ಉಡುಪಿಯಲ್ಲಿ ತರಗತಿಗಳನ್ನು ಸ್ಯಾನಿಟೈಸ್ ಮಾಡಿ ಇಂದಿನಿಂದ ತರಗತಿ ಆರಂಭ ಮಾಡಲು ತರಗತಿ ಸಿದ್ದಪಡಿಸಲಾಗಿದೆ.