ಕಾಸರಗೋಡು, ನ 01(SM): ಕಾಸರಗೋಡಿನ ಕನ್ನಡಿಗರ ಪರಿಸ್ಥಿತಿ, ಹಕ್ಕು ಸಂರಕ್ಷಣೆ, ಶಾಲೆಗಳ ಸ್ಥಿತಿ ಬಗ್ಗೆ ಎಲ್ಲಾ ಕನ್ನಡ ಪರ ಸಂಘಟನೆಗಳನ್ನು ವಾರದೊಳಗೆ ಬೆಂಗಳೂರಿಗೆ ಕರೆದು ನಿಯೋಗವೊಂದು ಕರ್ನಾಟಕ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಗಮನಕ್ಕೆ ತರಲು ಕಸ್ತೂರಿ ಕರ್ನಾಟಕ ಜನಪದ ವೇದಿಕೆ ನಿರ್ಧರಿಸಿದೆ.
ಭಾಷಾ ಅಲ್ಪಸಂಖ್ಯಾತರ ಸಂವಿಧಾನ ಬದ್ಧವಾದ ಹಕ್ಕುಗಳನ್ನು ಕಸಿಯುವ ಸರಕಾರದ ನಿಲುವು ಮತ್ತು ಕನ್ನಡ ವಿರೋಧಿ ನೀತಿಯನ್ನು ಪ್ರತಿಭಟಿಸಿ ಕೇರಳ ರಾಜ್ಯೋತ್ಸವ ದಿನವಾದ ಗುರುವಾರದಂದು ಕಾಸರಗೋಡು ಕನ್ನಡ ಹೋರಾಟ ಸಮಿತಿ ನೇತೃತ್ವದಲ್ಲಿ ವಿವಿಧ ಕನ್ನಡ ಸಂಘಗಳ ಆಶ್ರಯದಲ್ಲಿ ಕರಂದಕ್ಕಾಡಿನಲ್ಲಿ ಕನ್ನಡ ಹಕ್ಕು ಸಂರಕ್ಷಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡ ಶಾಲೆಯಲ್ಲಿ ಕನ್ನಡ ಶಿಕ್ಷಕರ ನೇಮಕ ಮಾಡಬೇಕು, ಕನ್ನಡ ಭಾಷಿಗರನ್ನು ಗೌರವಿಸಿ, ಕಾಸರಗೋಡಿನ ಕನ್ನಡಿಗರ ಹಿತರಕ್ಷಣೆ ಬಗ್ಗೆ ಕರ್ನಾಟಕ ಮುಖ್ಯಮಂತ್ರಿಯವರು ಕೇರಳದ ಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸಬೇಕು. ಭಾಷೆ, ಗಡಿ, ಶಾಲೆಗಳ ವಿಚಾರಗಳ ಬಗ್ಗೆ ಕರ್ನಾಟಕ ಮುಖ್ಯಮಂತ್ರಿವರು ಕಾಸರಗೋಡಿಗೆ ಬಂದು ಜನರ ಭಾವನೆಯನ್ನು ಕೇಳಬೇಕು
ಎಂದು ಹೇಳಿದರು.
ಕಾಸರಗೋಡಿನ ಕನ್ನಡಿಗರ ಸಂವಿಧಾನ ಬದ್ಧವಾದ ಹಕ್ಕುಗಳಂತೆ ಅವರ ನ್ಯಾಯುತ ಬೇಡಿಕೆಗಳನ್ನು ಒಂದು ವರ್ಷದ ಒಳಗೆ ಈಡೇರಿಸದೇ ಇದ್ದಲ್ಲಿ ಮುಂದಿನ ನವಂಬರ್ ತಿಂಗಳಲ್ಲಿ ಕನ್ನಡ ಭಾಷಿಕರ ಮೇಲೆ ನಡೆಯುವ ಅನ್ಯಾಯ ಪ್ರತಿಭಟಿಸಲು ಕಸ್ತೂರಿ ಕರ್ನಾಟಕ ಜನಪದ ವೇದಿಕೆಯ ಒಂದು ಸಾವಿರ ಕಾರ್ಯಕರ್ತರು ಕಾಸರಗೋಡಿಗೆ ಆಗಮಿಸಲಿದ್ದಾರೆ ಎಂದು ಹೋರಾಟಗಾರರು ಹೇಳಿದರು.