ಉಡುಪಿ, ಸೆ. 04 (DaijiworldNews/PY): ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಹಿನ್ನೆಲೆ ನಗರ ಪ್ರದೇಶ ಭಾಗಶಃ ಬಂದ್ ಆಗಿದ್ದು, ಆಹಾರ, ದಿನಸಿ ಸೇರಿದಂತೆ ತರಕಾರಿ, ಮೀನು ಹಾಗೂ ಮಾಂಸದ ಅಂಗಡಿ ಹೊರತುಪಡಿಸಿ ಉಳಿದ ಅಂಗಡಿಗಳು ಬಂದ್ ಆಗಿವೆ.
ಇನ್ನು ಜಿಲ್ಲೆಯಲ್ಲಿ ಬಸ್ ಸಂಚಾರ ಯಥಾಸ್ಥಿತಿ ಮುಂದುವರಿದಿದ್ದು, ಉಡುಪಿ, ಮಂಗಳೂರು, ಕುಂದಾಪುರ ಸೇರಿದಂತೆ ಸರ್ವಿಸ್, ಎಕ್ಸ್ಪ್ರೆಸ್ ಸಂಚಾರ ಎಂದಿನಂತೆ ಮುಂದುವರಿದಿದೆ. ಆದರೆ, ಬಸ್ಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಕಂಡುಬಂದಿದೆ.
ಅಗತ್ಯ ವಸ್ತುಗಳ ಅಂಗಡಿಗಳಿಗೆ ಮಧ್ಯಾಹ್ನ 2 ಗಂಟೆಯವರೆಗೆ ಅವಕಾಶ ನೀಡಲಾಗಿದೆ. ಹೆಚ್ಚಿನ ಚಟುವಟಿಕೆಗಳಿಗೆ ಅವಕಾಶ ಇರುವ ಹಿನ್ನೆಲೆ ಎಂದಿನಂತೆ ಜನಸಂಚಾರ ಕಂಡುಬಂದಿದೆ.
ಜಿಲ್ಲೆಯಲ್ಲಿ ಹೆಚ್ಚಿನ ಎಲ್ಲಾ ಚಟುವಟಿಕೆಗಳಿಗೆ ಅವಕಾಶ ನೀಡಿರುವ ಕಾರಣ, ಜನಸಂಚಾರ ಎಂದಿನಂತೆ ಕಂಡುಬಂದಿದೆ.