ಕಾಸರಗೋಡು, ಸೆ. 03 (DaijiworldNews/SM): ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪಶ್ಚಿಮ ಬಂಗಾಳ ನಿವಾಸಿಯೋರ್ವನನ್ನು ಆದೂರು ಠಾಣಾ ಪೊಲೀಸರು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳ ಕೂಚ್ ಬಿಹಾರ್ ನ ರಫಿಕುಲ್ ಮಿಯಾ(26) ಬಂಧಿತ ಆರೋಪಿ.
ಈತ ನಾಲ್ಕು ವರ್ಷಗಳಿಂದ ಮುಳ್ಳೇರಿಯ ಪರಿಸರದಲ್ಲಿ ಟೈಲ್ಸ್ ಕಾರ್ಮಿಕನಾಗಿ ದುಡಿಯುತ್ತಿದ್ದು, 2019ರಲ್ಲಿ ಕೃತ್ಯ ನಡೆದಿತ್ತು. ಈತ ವಾಸವಾಗಿರುವ ಕ್ವಾಟ್ರರ್ಸ್ ಸಮೀಪದ ಮನೆಯೊಂದರ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದು, ಈ ಬಗ್ಗೆ ಲಭಿಸಿದ ದೂರಿನಂತೆ ಆರೋಪಿಯನ್ನು ಆದೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕೃತ್ಯದ ಬಳಿಕ ಈತ ತಲೆ ಮರೆಸಿಕೊಂಡಿದ್ದನು.