ಕಾಸರಗೋಡು, ನ 01 (MSP): ಮೊಬೈಲ್ ಟವರ್ ಏರಿದ ವೃದ್ಧರೊಬ್ಬರು ಆತ್ಮಹತ್ಯೆ ನಡೆಸುವುದಾಗಿ ಬೆದರಿಸಿದ ಘಟನೆ ಕಾಸರಗೋಡಿನ ಜಿಲ್ಲಾಧಿಕಾರಿ ಕಚೇರಿ ಬಳಿ ನ.01ರ ಗುರುವಾರ ನಡೆದಿದೆ.
ಸಾಂದರ್ಭಿಕ ಚಿತ್ರ
ನಂತರ ಅವರ ಮನವೊಲಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸ್ಥಳೀಯ ನಿವಾಸಿ 69 ರ ಹರೆಯದ ಮೋಹನ್ ದಾಸ್ ಟವರ್ ಏರಿ ಬೆದರಿಸಿದ ವ್ಯಕ್ತಿ. ಆಸ್ತಿ ವಿವಾದವನ್ನು ಸರಿಪಡಿಸುವಂತೆ ಮೋಹನ ದಾಸ್ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಆದರೆ, ಸಮಸ್ಯೆ ಇತ್ಯರ್ಥಗೊಂಡಿರಲಿಲ್ಲ. ಈ ಹಿನ್ನೆಲೆ ನೊಂದ ಮೋಹನ್ ದಾಸ್ ಇಂದು ಡಿಸಿ ಕಚೇರಿ ಬಳಿಯ ಟವರ್ ಏರಿ ಆತ್ಮಹತ್ಯೆಯ ಬೆದರಿಕೆಯೊಡ್ಡಿದ್ದರು. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಮೋಹನ್ ದಾಸ್ ಮನವೊಲಿಸುವಲ್ಲಿ ಸಫಲರಾಗಿದ್ದಾರೆ.