ಕಾರ್ಕಳ, ಸ. 02 (DaijiworldNews/HR): ಮದ್ಯದ ಅಮಲೇರಿದ ವ್ಯಕ್ತಿಯೊಬ್ಬರು ನೆಲಕ್ಕೆ ಬಿದ್ದು ಸಾವಿಗೀಡಾದ ಘಟನೆ ಶಿರ್ಲಾಲು ಹಾಡಿ ಮನೆಯಲ್ಲಿ ನಡೆದಿದೆ.
ಮೃತಪಟ್ಟವರನ್ನು ಬಾಬು ಪೂಜಾರಿ (69)ಎಂದು ಗುರುತಿಸಲಾಗಿದೆ.
ಮದ್ಯ ಸೇವನೆಯ ಚಟವೊಂದಿದ್ದ ಅವರು ವಿಪರೀತವಾಗಿ ಮದ್ಯದ ನಶೆಯಲ್ಲಿ ತೂರಾಡುತ್ತಿದ್ದು, ಮನೆಯ ಹಿಂಬದಿಯಲ್ಲಿ ಬಿದ್ದುಕೊಂಡ ಗಂಭೀರ ಸ್ಥಿತಿಯಲ್ಲಿ ಇದ್ದು ಅವರನ್ನು ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಅದಾಗಲೇ ಅವರು ಮೃತಪಟ್ಟಿದ್ದಾರೆ ಎಂದು ಅಲ್ಲಿನ ವೈದ್ಯರು ದೃಢಪಡಿಸಿದ್ದರು.
ಈ ಬಗ್ಗೆ ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.