ಮಂಗಳೂರು, ಅ 31(SM): ನಗರದ ಪ್ರಖ್ಯಾತ ಮಲೈಕಾ ಸಂಸ್ಥೆಯ ಗ್ರಾಹಕರ ವಾರ್ಷಿಕ ಸಭೆ ಮತ್ತು ಮಲೈಕಾ ಸಂಸ್ಥೆಯ ‘ಯಶೋಮ’ ಗೃಹೋಪಯೋಗಿ ನೂತನ ವಸ್ತುಗಳ ಲೋಕಾರ್ಪಣೆ ಕಾರ್ಯಕ್ರಮ ಮಂಗಳೂರಿನ ಮಿಲಾಗ್ರೀಸ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ಬೋಂದೆಲ್ ಚರ್ಚ್ ನ ಧರ್ಮಗುರುಗಳಾದ ಫಾ. ಆ್ಯಂಡ್ರು ಲಿಯೊ ಡಿಸೊಜ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಮಲೈಕಾ ಸಂಸ್ಥೆಯ ಮುಖ್ಯಸ್ಥರಾದ ಗಿಲ್ಬರ್ಟ್ ಡಿಸೋಜ ಅವರ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಲೈಕಾ ತನ್ನದೇ ಬ್ರ್ಯಾಂಡ್ ನ ಇಲೆಕ್ಟ್ರಾನಿಕ್ ಸಾಮಾಗ್ರಿಗಳನ್ನು ಮಾರುಕಟ್ಟೆಗೆ ತಂದಿರುವುದು ಹೆಮ್ಮೆಯ ಸಂಗತಿ. ಮಂಗಳೂರು ಮತ್ತು ಮುಂಬೈಯಲ್ಲಿ ಮಲೈಕಾ ತಮ್ಮ ವಿವಿಧ ಅತ್ಯುತ್ತಮ ಸಾಮಾಗ್ರಿಗಳ ಮೂಲಕ ಮನೆ ಮಾತಾಗಿದೆ. ವಾರ್ಷಿಕ ಸಭೆಯಲ್ಲಿ ಸೇರಿದ ಜನರನ್ನು ಕಂಡಾಗ ಮಲೈಕಾ ಎಷ್ಟೊಂದು ತೃಪ್ತಿದಾಯಕವಾದ ಸಾಮಾಗ್ರಿಗಳನ್ನು ಗ್ರಾಹಕರಿಗೆ ಪೂರೈಸುತ್ತದೆ ಎಂಬುದು ತಿಳಿಯುತ್ತದೆ ಎಂದರು.
ಇನ್ನು ಇದೇ ಸಂದರ್ಭ ಮಾತನಾಡಿದ ಸಂಸ್ಥೆಯ ಮಾಲಕರಾದ ಗಿಲ್ಬರ್ಟ್ ಡಿಸೋಜ, ತಮ್ಮ ಗ್ರಾಹಕರ ಸಹಕಾರದಿಂದ ಸಂಸ್ಥೆ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಇಂದು ಬೆಳೆದು ನಿಂತ ಹಂತಕ್ಕೆ ತಲುಪಲು ಮಲೈಕಾದ ಎಲ್ಲಾ ಗ್ರಾಹಕರು ಕಾರಣರಾಗಿದ್ದು, ಅವರಿಗೆ ಕೃತಜ್ಞೆತೆ ಅರ್ಪಿಸುತ್ತೇನೆ ಎಂದರು.
ಕಾರ್ಯಕ್ರಮ ದಲ್ಲಿ ಸಂಸ್ಥೆ ಸಿಇಓ ನೈಝಿಲ್ ಪಿಂಟೊ, ರಚನಾ ಸಂಸ್ಥೆಯ ಅಧ್ಯಕ್ಷರಾದ ಸ್ಟ್ಯಾನಿ ಅಲ್ವಾರಿಸ್, ಮಲೈಕಾ ಮಂಗಳೂರು ವಿಭಾಗದ ಮೇಲ್ವಿಚಾರಕಿ ರೀನಾ ಮತ್ತಿತರರು ಉಪಸ್ಥಿತರಿದ್ದರು.