ಕುಂಬಳೆ,ಅ 12: ಉಚಿತವಾಗಿ ವೀಸ ನೀಡಿ ಕೊಲ್ಲಿಗೆ ಕಳುಹಿಸಿ ಆತನಲ್ಲಿ ಗಾಂಜಾವಿದ್ದ ಸೂಟ್ಕೇಸ್ ನೀಡಿದ ಪ್ರಕರಣದಲ್ಲಿ ಆರೋಪಿಯನ್ನು ಸೆರೆ ಹಿಡಿಯಲಾಗಿದೆ. ಗಲ್ಫ್ ಗೆ ತೆರಳುವ ಯುವಕನೋರ್ವನ ಬಳಿ ಉಪ್ಪಿನಕಾಯಿ ಎಂದು ನಂಬಿಸಿ ಗಾಂಜಾ ಹೊಂದಿದ್ದ ಪೊಟ್ಟಣವನ್ನು ನೀಡಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಬಂಧಿತನನ್ನು ಕುಂಬಳೆ ಕೊಡ್ಯಮ್ಮೆಯ ಸೂಫಿ ( ೩೭) ಎಂದು ಗುರುತಿಸಲಾಗಿದೆ. ಕೊಡ್ಯಮ್ಮೆ ಛತ್ರಪಲ್ಲದ ಬಶೀರ್ ಎಂಬಾತ ನೀಡಿದ ದೂರಿನಂತೆ ಈತನನ್ನು ಬಂಧಿಸಲಾಗಿದೆ. ಗಲ್ಫ್ ಗೆ ತೆರಳಲಿದ್ದ ಬಶೀರ್ ಬಳಿಗೆ ಬಂದಿದ್ದ ಈತ ಗಲ್ಫ್ ನಲ್ಲಿರುವ ತನ್ನ ಸ್ನೇಹಿತನೋರ್ವನಿಗೆ ಉಪ್ಪಿನ ಕಾಯಿ ಕೊಂಡೊಯ್ಯಬಹುದೇ ಎಂದು ಕೇಳಿದ್ದು , ಬಶೀರ್ ಒಪ್ಪಿದಾಗ ಸೂಫಿ ಪೊಟ್ಟಣವೊಂದನ್ನು ನೀಡಿದ್ದನು . ಪೊಟ್ಟಣ ಪಡೆಯಲು ಯುವಕನೋರ್ವ ಬರುವುದಾಗಿ ಈತ ಹೇಳಿದ್ದನು
ಬಶೀರ್ ಗಲ್ಫ್ ಗೆ ಪ್ರಯಾಣಿಸಿದ್ದು , ದೋಹಾ ವಿಮಾನ ನಿಲ್ದಾಣದಲ್ಲಿ ತಪಾಸಣೆ ನಡೆಸಿದಾಗ ಗಾಂಜಾ ಪತ್ತೆಯಾಗಿದೆ. ಸುಮಾರು ನಾಲ್ಕು ಕಿಲೋ ಗಾಂಜಾ ಪತ್ತೆಯಾಗಿತ್ತು . ವಂಚನೆಗೊಳಗಾದ ಬಶೀರ್ ದೋಹಾ ದಲ್ಲಿ ಜೈಲು ಸೇರಿದ್ದು , ತಾನು ನಿರಪರಾಧಿ ಎಂದು ತಿಳಿಸಿದರೂ ತಪ್ಪಿತಸ್ಥ ನೆಂದು ಪೊಲೀಸರು ಈತನನ್ನು ಬಂಧಿಸಿ ಈಗ ಜೈಲು ಸೇರಿದ್ದಾನೆ.ಈ ಹಿನ್ನೆಲೆಯಲ್ಲಿ ಮುಹಮ್ಮದ್ನ ಪತ್ನಿ ಮುಂತಾಸ್ ನೀಡಿದ ದೂರಿನಂತೆ ಸೂಫಿ ವಿರುದ್ಧ ಕೇಸು ದಾಖಲಿಸಿದ್ದರು. ಈ ಕೇಸಿನಂತೆ ನಿನ್ನೆ ರಾತ್ರಿ ಅಡಿಶನಲ್ ಎಸ್.ಐ. ಬಾಬು ಥೋ ಮಸ್ ಆರೋಪಿ ಸೂಫಿಯನ್ನು ಬಂಧಿಸಿದ್ದಾರೆ. ಮುಂದಿನ ತನಿಖೆ ನಡೆಸಲಾಗುತ್ತಿದೆ.