ಬಂಟ್ವಾಳ, ಅ 31(SM): ಆಕಸ್ಮಿಕವಾಗಿ ಬೆಂಕಿ ತಗುಲಿ ಗಂಭೀರ ಗಾಯಗೊಂಡಿದ್ದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಬಿಸಿರೋಡಿನ ಜಕ್ರಿಬೆಟ್ಟು ಎಂಬಲ್ಲಿ ನಡೆದಿದೆ. ಜಕ್ರಿಬೆಟ್ಟು ನಿವಾಸಿ ವಾಲ್ಟರ್ ಡಿಸೋಜ ಅವರ ಪತ್ನಿ ಲೀನಾ ಮೆಟಿಲ್ಡಾ(58) ಮೃತ ಮಹಿಳೆ.
ಅಕ್ಟೋಬರ್ 22ರಂದು ಸಂಜೆ ಸುಮಾರು 4.30ರ ವೇಳೆ ಮನೆಯ ಹೊರಗೆ ಬಚ್ಚಲು ಕೊಟ್ಟಿಗೆಯಲ್ಲಿ ಸ್ನಾನ ಮಾಡಲು ನೀರು ಕಾಯಿಸುವ ಸಮಯದಲ್ಲಿ ಪಕ್ಕದಲ್ಲಿ ಇದ್ದ ತೆಂಗಿನ ಗರಿಗೆ ಬೆಂಕಿ ಹಚ್ಚಿದ ಸಂದರ್ಭ ಬೆಂಕಿ ಇವರು ಧರಿಸಿದ್ದ ನೈಟಿಗೆ ತಗುಲಿತ್ತು.
ಸುಟ್ಟ ಗಾಯಗಳಾಗಿದ್ದ ಲೀನಾರನ್ನು ತಕ್ಷಣ ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ ಎಂದು ಪೋಲೀಸರು ತಿಳಿಸಿದ್ದಾರೆ.
ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.