ಮಂಗಳೂರು, ಸೆ 01(DaijiworldNews/MS): ಜಿಲ್ಲೆಯಲ್ಲಿ ಇಂದಿನಿಂದ ದ್ವಿತೀಯ ಪಿಯುಸಿ ತರಗತಿಗಳು ಆರಂಭಗೊಂಡಿದೆ. ಪದವಿಪೂರ್ವ ಶಿಕ್ಷಣ ಇಲಾಖೆ ಜಿಲ್ಲಾಡಳಿತ ಪ್ರಕಟಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಪ್ರಾಂಶುಪಾಲರಿಗೆ ಸೂಚನೆ ನೀಡಲಾಗಿದ್ದು ಅದರಂತೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಮಕ್ಕಳ ಹಾಜರಾತಿ ಗರಿಷ್ಠವಾಗಿದ್ದರೆ ಶೇಕಡಾ 50 ರಷ್ಟು ಮಂದಿಗೆ ಅವಕಾಶ ನೀಡಿ ಉಳಿದ ವಿದ್ಯಾರ್ಥಿಗಳಿಗೆ ಇತರ ಇತರ ಶಿಪ್ಟ್ ಗಳಲ್ಲಿ ತರಗತಿ ನಡೆಸುವಂತೆ ಅವಕಾಶಗಳು ಮಾಡಿಕೊಡಲಾಗಿದೆ. ಅದರಂತೆಯೇ ನಾರಾಯಣ ಗುರು ಕಾಲೇಜು ಕುದ್ರೋಳಿಯಲ್ಲಿ ಪಿಯುಸಿ ತರಗತಿ ಇಂದಿನಿಂದ ಆರಂಭಗೊಂಡಿದ್ದು ಇಪ್ಪತ್ತು ವಿದ್ಯಾಥಿಗಳಿಗೆ ಅವಕಾಶ ಮಾಡಿಕೊಡಲಾಗಿದ್ದು ಈ ಪೈಕಿ ಹದಿನಾಲ್ಕು ವಿದ್ಯಾರ್ಥಿಗಳು ಹಾಜರಾಗಿದ್ದಾರೆ.
ಪದವಿಪೂರ್ವ ಶಿಕ್ಷಣ ಇಲಾಖೆಯೂ ಪ್ರಾಂಶುಪಾಲರು ಮಾರ್ಗಸೂಚಿ ಪಾಲನೆ ಅನುಸರಿಸಿ ವಿದ್ಯಾರ್ಥಿಗಳಿಗೂ ತೊಂದರೆಯಾಗದ ರೀತಿಯಲ್ಲಿ ತರಗತಿಗಳನ್ನು ಮಾಡಲು ಪೂರ್ವಕವಾಗಿ ಸ್ವಯಂ ಆಗಿ ನಿರ್ಧಾರ ತೆಗೆದುಕೊಳ್ಳಲು ಸೂಚಿಸಲಾಗಿದೆ. ಇನ್ನುಬೌದ್ಧಿಕ ತರಗತಿ ಕಡ್ಡಾಯವಲ್ಲ ಆನ್ಲೈನ್ ತರಗತಿಗೂ ಅವಕಾಶವಿರುತ್ತದೆ. ಮಾರ್ಗಸೂಚಿ ಪಾಲನೆ ಮೇಲೆ ಇಲಾಖಾಧಿಕಾರಿಗಳು ಮೇಲ್ವಿಚಾರಣೆ ನಡೆಸಲಿದ್ದಾರೆ ಎಂದು ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಹೇಳಿದ್ದಾರೆ.