ಕಾಸರಗೋಡು, ಆ 31 (DaijiworldNews/PY): ಸಾಕ್ಸ್ನೊಳಗೆ ಬಚ್ಚಿಟ್ಟು ಸಾಗಾಟ ಮಾಡುತ್ತಿದ್ದ ಸುಮಾರು 60 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಕಣ್ಣೂರು ವಿಮಾನ ನಿಲ್ದಾಣದಿಂದ ವಶಪಡಿಸಿಕೊಳ್ಳಲಾಗಿದ್ದು, ಕಾಸರಗೋಡು ನಿವಾಸಿಯನ್ನು ಬಂಧಿಸಲಾಗಿದೆ.
ಮೊಗ್ರಾಲ್ ಪುತ್ತೂರಿನ ಮುಹಮ್ಮದ್ ಕಮರುದ್ದೀನ್ (31) ಬಂಧಿತ.
ಶಾರ್ಜಾದಿಂದ ಮಂಗಳವಾರ ಮುಂಜಾನೆ ಆಗಮಿಸಿದ ವಿಮಾನದಲ್ಲಿ ಈತ ಬಂದಿಳಿದಿದ್ದನು. ಕಮರುದ್ದೀನ್ನ ಬಗ್ಗೆ ಸಂಶಯಗೊಂಡ ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದಾಗ ಸಾಕ್ಸ್ ನೊಳಗೆ ಚಿನ್ನಾಭರಣ ಬಚ್ಚಿಟ್ಟು ಸಾಗಿಸುತ್ತಿರುವುದು ಪತ್ತೆಯಾಗಿದೆ.