ಕಾರ್ಕಳ, ಆ 31 (DaijiworldNews/PY): ಬ್ರಹ್ಮಾವರದಲ್ಲಿ ಆಯೋಜಿಸಲಾಗಿದ್ದ ರೋಟರಿ ಜಿಲ್ಲೆ 3182ರ 2020-21ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಾರ್ಕಳ ರೋಟರಿ ಕ್ಲಬ್ಗೆ ಒಟ್ಟು 39 ಜಿಲ್ಲಾ ಪ್ರಶಸ್ತಿ ಹಾಗೂ ರೋಟರಿ ಜಿಲ್ಲೆ 3182ರಲ್ಲಿ ಅತ್ಯುತ್ತಮ ಕ್ಲಬ್ ಪ್ರಶಸ್ತಿ ಹಾಗೂ ವಲಯ 5ರಲ್ಲಿ ಮೂರು ಪ್ರಶಸ್ತಿಗಳಾದ ಡೈಮಂಡ್ ಸ್ಟಾರ್ ಅಧ್ಯಕ್ಷೆ, ಗೋಲ್ಡ್ ಸ್ಟಾರ್ ಕಾರ್ಯದರ್ಶಿ ಹಾಗೂ ವಲಯದ ಅತ್ಯುತ್ತಮ ಕ್ಲಬ್ ಪ್ರಶಸ್ತಿ ಸೇರಿದಂತೆ 42 ಪ್ರಶ್ತಿ ಲಭಿಸಿದೆ.
ರೋಟರಿ ಜಿಲ್ಲೆ 3182ರ 2021-22ನೇ ಸಾಲಿನ ಜಿಲ್ಲಾ ಗವರ್ನರ್ ರಾಮಚಂದ್ರ ರಾಮಚಂದ್ರ ಮೂರ್ತಿ, ನಿಕಟಪೂರ್ವ ಗವರ್ನರ್ ರಾಜರಾಮ್ ಭಟ್, ಮಾಜಿ ಗವರ್ನರ್ಗಳಾದ ರಮೇಶ್ ಸುಬ್ರಹ್ಮಣ್ಯ, ಡಾ, ಭರತೇಶ್, ಆದಿರಾಜ್, ಮಾಜಿ ಸಹಾಯಕ ಗವರ್ನರ್ ನವೀನ್ ಅಮೀನ್ ಉಪಸ್ಥಿತರಿದ್ದರು.
ಕಾರ್ಕಳ ರೋಟರಿ ಕ್ಲಬ್ನ 2020-21 ನೇ ಸಾಲಿನ ಅಧ್ಯಕ್ಷೆ ರೇಖಾ ಉಪಾದ್ಯಾಯ ಹಾಗೂ ಕಾರ್ಯದರ್ಶಿ ಶಶಿಕಲಾ ಕೆ.ಹೆಗ್ಡೆ ಪ್ರಶಸ್ತಿ ಸ್ವೀಕರಿಸಿದರು.
ಸದಸ್ಯರಾದ ಸೌಜನ್ಯ ಉಪಾಧ್ಯಾಯ, ಇಕ್ಬಾಲ್ ಅಹಮ್ಮದ್, ಬಾಲಕೃಷ್ಣ ದೇವಾಡಿಗ ಉಪಸ್ಥಿತರಿದ್ದರು.