ಕಾರ್ಕಳ, ಆ.31 (DaijiworldNews/HR): ಇಂಪೀರಿಯಲ್ ಸೊಸೈಟಿ ಆಫ್ ಇನ್ನೋವೇಟಿವ್ ಇಂಜಿನಿಯರ್ ಸಂಸ್ಥೆಯ ವತಿಯಿಂದ ಇಲೆಕ್ಟ್ರಿಕ್ ವಾಹನಗಳ ತಂತ್ರಜ್ಞಾನಾಭಿವೃದ್ಧಿಯಲ್ಲಿ ಪ್ರತಿಷ್ಠಿತ ನಿಟ್ಟೆ ಸಮೂಹ ವಿದ್ಯಾಸಂಸ್ಥೆಯ ಅಂಗಸಂಸ್ಥೆಯಾದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಕಾಲೇಜಿನ ಉಪಕ್ರಮವನ್ನು ಪರಿಗಣಿಸಿ 2020-21ನೇ ಸಾಲಿನ ಇ-ಮೊಬಿಲಿಟಿ ಪ್ರಶಸ್ತಿಯನ್ನು ನಿಟ್ಟೆ ತಾಂತ್ರಿಕ ಕಾಲೇಜಿಗೆ ಘೋಷಿಸಿದೆ.
ಮುಂದಿನ ದಿನಗಳಲ್ಲಿ ಇಲೆಕ್ಟ್ರಿಕ್ ವಾಹನಗಳಿಗೆ ಬರುವ ಬೇಡಿಕೆಯನ್ನು ಮನಗಂಡ ನಮ್ಮ ಸಂಸ್ಥೆಯ ಸಂಶೋಧಕರು ತಂತ್ರಜ್ಞಾನಾಭಿವೃದ್ಧಿಯಲ್ಲಿ ವಿವಿಧ ಪ್ರಯೋಗಗಳನ್ನು ನಡೆಸುತ್ತಿದ್ದು, ಸಂಸ್ಥೆಯ ಈ ಶ್ರಮ ಹಾಗೂ ಉತ್ಸಾಹವನ್ನು ಗುರುತಿಸಿ ಐಎಸ್ಐಇ ಸಂಸ್ಥೆಯು ಈ ಪ್ರಶಸ್ತಿಯನ್ನು ನೀಡಿರುವುದು ಸಂಸ್ಥೆಯ ಈ ಯೋಜನೆಗೆ ಹುಮ್ಮಸ್ಸು ತಂದಿದೆ' ಎಂದು ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಪ್ಳೂಣ್ಕರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.