ಕಾರ್ಕಳ, ಆ.31 (DaijiworldNews/HR): ಹಿರಿಯಡ್ಕ ಮೈಟೆಕ್ ಐಟಿಐನಲ್ಲಿ ಅಟೋಮೊಬೈಲ್ ಕೋರ್ಸ್ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ನಡೆದಿದೆ.
ಸಾಂಧರ್ಭಿಕ ಚಿತ್ರ
ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ನೀರೆ ಗ್ರಾಮದ ನಿವಾಸಿ ಸದಾಶಿವ ಅವರ ಮಗ ಅನೀಶ್ (19) ಎಂದು ಗುರಿತಿಸಲಾಗಿದೆ.
ಅನೀಶ್ ಜೊತೆ ಪರೀಕ್ಷೆಗೆ ಹೋಗಲು ಸಂಬಂಧಿಯಾದ ನೆರೆಮನೆಯ ಆಶಿಶ್ ಬೆಳಿಗ್ಗೆ 10:00 ಗಂಟೆಗೆ ಮತ್ತು 11:00 ಗಂಟೆಗೆ ಫೋನ್ ಮಾಡಿದರೂ ತೆಗೆಯದ ಕಾರಣ ಕೂಡಲೇ ಮನೆಗೆ ಹೋಗಿ ಬೆಡ್ರೂಮಿನ ಬಾಗಿಲು ಬಡಿದರೂ ಬಾಗಿಲು ತೆರೆಯದ ಕಾರಣ ಕಿಟಿಕಿಯಿಂದ ನೋಡಿದಾಗ ಫ್ಯಾನ್ಹುಕ್ಗೆ ಶಾಲಿನಿಂದ ನೇಣು ಹಾಕಿಕೊಂಡಿರುವುದನ್ನು ನೋಡಿ ಬೆಡ್ರೂಮಿನ ಬಾಗಿಲು ಒಡೆದು ಅನೀಶ್ನನ್ನು ಬೈಲೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಪರೀಕ್ಷಿಸಿ ಆತನು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಇನ್ನು ಅನೀಶ್ನು ಯಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಅನೀಶ್ ತಂದೆ ಸದಾಶಿವ ದೂರಿನ ಆಧಾರದ ಮೇಲೆ ಕಾರ್ಕಳ ನಗರ ಠಾಣೆಯಲ್ಲಿ ಸೆಕ್ಷನ್ 174 ಸಿಆರ್ಪಿಸಿ ಅಡಿಯಲ್ಲಿ ನೋಂದಣಿ ಸಂಖ್ಯೆ UDR 25/2021 ಅಡಿಯಲ್ಲಿ ಪೊಲೀಸ್ ಪ್ರಕರಣ ದಾಖಲಾಗಿದೆ.
ಅನೀಶ್ ಪೋಷಕರು ಮತ್ತು ಸಹೋದರನನ್ನು ಅಗಲಿದ್ದಾರೆ.