ಮೂಡುಬಿದ್ರೆ, ಆ. 30 (DaijiworldNews/HR): ಪುತ್ತಿಗೆ ಗ್ರಾಮದ ಕೂಡಿಯಡ್ಕ ಒಬೆಟ್ಟು ಪಾಲ್ಕೆ ನಿವಾಸಿ ವಿಜಯ ಗೌಡ (33) ವಿರುದ್ಧ ಲೈಂಗಿಕ ಕಿರುಕುಳ ಮತ್ತು ಮಹಿಳೆಯಿಂದ ಹಣ ಸುಲಿಗೆ ಮಾಡಿದ್ದಕ್ಕಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಾಂಧರ್ಭಿಕ ಚಿತ್ರ
ದೂರುದಾರ ಮಹಿಳೆ, ಆರೋಪಿ ವಿಜಯ ಗೌಡ ತನ್ನ ಮೊಬೈಲ್ ಸಂಖ್ಯೆಯನ್ನು ತೆಗೆದುಕೊಂಡು ಆಗಾಗಾ ಕರೆ ಮಾಡಿ ಅಸಭ್ಯ ಭಾಷೆಯಲ್ಲಿ ಮಾತನಾಡುತ್ತಿದ್ದು, ತನ್ನ ನಗ್ನ ಫೋಟೋಗಳನ್ನು ವಾಟ್ಸಾಪ್ನಲ್ಲಿ ಕಳುಹಿಸುವಂತೆ ಕೇಳಿಕೊಂಡಿದ್ದಾನೆ. ಮಹಿಳೆ ನಿರಾಕರಿಸಿದಾಗ, ಆರೋಪಿಯು ತನ್ನೊಂದಿಗೆ ತನಗೆ ಅಕ್ರಮ ಸಂಬಂಧವಿದೆ ಎಂದು ಹೇಳುವ ಮೂಲಕ ಅವಳಿಗೆ ಬೆದರಿಕೆ ಹಾಕಿದ್ದಾನೆ.
ಮಹಿಳೆಯಿಂದ ತನ್ನ ನಗ್ನ ಫೋಟೋಗಳನ್ನು ವಾಟ್ಸಾಪ್ನಲ್ಲಿ ಕಳುಹಿಸಿದಕೊಂಡು ಬಳಿಕ ಆರೋಪಿಯು ಆಕೆಯೊಂದಿಗೆ ದೈಹಿಕ ಸಂಬಂಧ ಹೊಂದುವಂತೆ ಒತ್ತಾಯಿಸಿದ್ದಲ್ಲದೆ ಹಣದ ಬೇಡಿಕೆ ಕೂಡ ಇಟ್ಟಿದ್ದ. ಆರೋಪಿ ವಿಜಯ ಗೌಡ ಆಗಸ್ಟ್ 19 ರಂದು ಸಂತ್ರಸ್ತ ಮಹಿಳೆಯ ಮನೆಗೆ ಹೋಗಿ ತನ್ನ ನಗ್ನ ಫೋಟೋಗಳನ್ನು ಇತರರಿಗೆ ತೋಸುವುದಾಗಿ ಬೆದರಿಸಿ 2,000 ರೂ. ಪಡೆದುಕೊಂಡಿದ್ದಾನೆ.
ಆಗಸ್ಟ್ 28 ರಂದು ಆರೋಪಿಯು ಮತ್ತೆ ಮಹಿಳೆಯ ಮನೆಗೆ ಗೋಗಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ದೂರುದಾರರು ನಿರಾಕರಿಸಿದಾಗ, ಆಕೆಯ ನಗ್ನ ಫೋಟೋಗಳನ್ನು ವಾಟ್ಸಾಪ್ ನಲ್ಲಿ ಇತರರೊಂದಿಗೆ ಹಂಚಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.
ಇನ್ನು ಆರೋಪಿಯ ವಿರುದ್ಧ ಕಲಂ 354 ಎ, 354 ಡಿ, 384 ಮತ್ತು 506 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.