ಬೆಳ್ತಂಗಡಿ, ಆ 30 (DaijiworldNews/PY): ನೆರಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಹಿಳೆ ನಾಪತ್ತೆಯಾಗಿರುವ ಘಟನೆ ಆ.27ರಂದು ನಡೆದಿದೆ.
ನೆರಿಯ ಗ್ರಾಮದ ನಾಯಿಕಟ್ಟೆ ಚಿದಾನಂದ ಅವರ ಪತ್ನಿ ರಾಜಿ ರಾಘವನ್ (39) ನಾಪತ್ತೆಯಾದ ಮಹಿಳೆ.
ಈ ಬಗ್ಗೆ ರಾಜಿ ಅವರ ಪತಿ ಚಿದಾನಂದ ಅವರು ದೂರು ನೀಡಿದ್ದು, 95,000 ಹಾಗೂ ಎರಡು ಚಿನ್ನದ ಬಳೆಗಳನ್ನು ತೆಗೆದುಕೊಂಡು ಹೋಗಿದ್ದಾಳೆ ಎಂದು ಆರೋಪಿಸಿದ್ದಾರೆ.
ರಾಜಿಯವರು ವಿದೇಶದಲ್ಲಿ ಕೆಲಸ ಮಾಡುತ್ತಿದ್ದು, ಜು.11ರಂದು ನೆರುಯದ ನಾಯಿಕಟ್ಟೆ ಎಂಬಲ್ಲಿರುವ ತಮ್ಮ ಪತಿಯ ಮನೆಗೆ ವಾಪಾಸ್ಸಾಗಿದ್ದರು. ಆ.26ರಂದು ಎಂದಿನಂತೆ ಮಲಗಿದ್ದ ಆಕೆ ರಾತ್ರಿ 11 ಗಂಟೆಯ ಸುಮಾರಿಗೆ ಆಚೆ ಕೋಣೆಯಲ್ಲಿ ಮಲಗಿದ್ದ ಮಗಳೊಂದಿಗೆ ಮಲಗುವುದಾಗಿ ಹೇಳಿ ಎದ್ದು ಹೋಗಿದ್ದರು. ಆದರೆ, ಬೆಳಗ್ಗೆ ಮಗಳು ಎದ್ದು ನೋಡುವ ವೇಳೆ ತಾಯಿ ತನ್ನ ಬಳಿ ಮಲಗಿರದೇ, ಮನೆಯಲ್ಲಿಯೂ ಇಲ್ಲದೇ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ರಾಜಿ ಹಾಗೂ ಚಿದಾನಂದ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ರಾಜಿ ಅವರ ಪತಿ ನೀಡಿದ ದೂರಿನ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.