ಕಾರ್ಕಳ, 29 (DaijiworldNews/HR): ಬ್ರಹ್ಮಾವರದಲ್ಲಿ ನಡೆದ ರೋಟರಿ ಜಿಲ್ಲೆ 3182ರ 2020-21 ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರೋಟರಿ ಕ್ಲಬ್ ಕಾರ್ಕಳಕ್ಕೆ ಒಟ್ಟು 39 ಜಿಲ್ಲಾ ಪ್ರಶಸ್ತಿಗಳು ಹಾಗೂ ರೋಟರಿ ಜಿಲ್ಲೆ 3182 ರಲ್ಲಿ ಅತ್ಯುತ್ತಮ ಕ್ಲಬ್ ಪ್ರಶಸ್ತಿ ಹಾಗೂ ವಲಯ 5ರಲ್ಲಿ ಮೂರು ಪ್ರಶಸ್ತಿಗಳಾದ ಡೈಮಂಡ್ ಸ್ಟಾರ್ ಅಧ್ಯಕ್ಷೆ, ಗೋಲ್ಡನ್ ಸ್ಟಾರ್ ಕಾರ್ಯದರ್ಶಿ ಹಾಗೂ ವಲಯದ ಅತ್ಯುತ್ತಮ ಕ್ಲಬ್ ಪ್ರಶಸ್ತಿ ಹೀಗೆ ಒಟ್ಟಿಗೆ 42 ಪ್ರಶಸ್ತಿಗಳು ಲಭಿಸಿವೆ.
ಪ್ರಶಸ್ತಿ ಪ್ರದಾನ ಸಮಾರಂಭದ ವೇದಿಕೆಯಲ್ಲಿ ರೋಟರಿ ಜಿಲ್ಲೆ 3182 ರ 2021-22ನೇ ಸಾಲಿನ ಜಿಲ್ಲಾ ಗವರ್ನರ್ ರಾಮಚಂದ್ರಮೂರ್ತಿ, ನಿಕಟಪೂರ್ವ ಗವರ್ನರ್ ರಾಜರಾಮ್ ಭಟ್, ಮಾಜಿ ಗವರ್ನರ್ ಗಳಾದ ರಮೇಶ್, ಸುಬ್ರಹ್ಮಣ್ಯಂ, ಡಾ. ಭರತೇಶ್ ಅಧಿರಾಜ್ ಮಾಜಿ ಸಹಾಯಕ ಗವರ್ನರ್ ನವೀನ್ ಅಮೀನ್ ಉಪಸ್ಥಿತರಿದ್ದರು.
ಕಾರ್ಕಳ ರೋಟರಿ ಕ್ಲಬ್ಬಿನ 2020-21ನೇ ಸಾಲಿನ ಅಧ್ಯಕ್ಷೆ ರೇಖಾ ಉಪಾಧ್ಯಾಯ ಹಾಗೂ ಕಾರ್ಯದರ್ಶಿ ಶಶಿಕಲಾ ಕೆ. ಹೆಗ್ಡೆ ಪ್ರಶಸ್ತಿಗಳನ್ನು ಸ್ವೀಕರಿಸಿದರು. ಸದಸ್ಯರುಗಳಾದ ಸೌಜನ್ಯ ಉಪಾಧ್ಯಾಯ , ಇಕ್ಬಾಲ್ ಅಹಮ್ಮದ್, ಬಾಲಕೃಷ್ಣ ದೇವಾಡಿಗ ಉಪಸ್ಥಿತರಿದ್ದರು.