ಕಾಸರಗೋಡು, ಆ.28 (DaijiworldNews/HR): ಜಿಲ್ಲೆಯಲ್ಲಿ ಶನಿವಾರ 521 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 550 ಮಂದಿ ಗುಣಮುಖರಾಗಿದ್ದಾರೆ.
ಸಾಂಧರ್ಭಿಕ ಚಿತ್ರ
ಜಿಲ್ಲೆಯಲ್ಲಿ 4, 900 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, 19, 482 ಮಂದಿ ನಿಗಾದಲ್ಲಿದ್ದಾರೆ.
ಇನ್ನು ಜಿಲ್ಲೆಯಲ್ಲಿ ಇದುವರೆಗೆ 1,22,850 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 1,16,954 ಮಂದಿ ಗುಣಮುಖರಾಗಿದ್ದಾರೆ.
ಕೇರಳದಲ್ಲಿ 31, 265 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಇನ್ನು ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸೋಮವಾರದಿಂದ ಕೇರಳದಲ್ಲಿ ರಾತ್ರಿ ಕರ್ಫ್ಯೂ ಜಾರಿಗೆತರಲಾಗಿದ್ದು, ರಾತ್ರಿ 10 ರಿಂದ ಬೆಳಿಗ್ಗೆ 6ರ ತನಕ ಕರ್ಫ್ಯೂ ಜಾರಿಗೆ ತರಲು ರಾಜ್ಯ ಸರಕಾರ ತೀರ್ಮಾನಿಸಿದೆ.
ಎಲ್ಲಾ ಆದಿತ್ಯವಾರ ಸಂಪೂರ್ಣ ಲಾಕ್ ಡೌನ್ ಮತ್ತೆ ಜಾರಿಗೆ ತರಲಾಗಿದ್ದು, ಏಳು ಶೇಕಡಾ ಕ್ಕಿಂತ ಅಧಿಕ ಸೋಂಕು ಹೊಂದಿರುವ ಪ್ರದೇಶಗಳಲ್ಲಿ ಲಾಕ್ ಡೌನ್ ಜಾರಿಗೆ ತರಲು ಸರಕಾರ ತೀರ್ಮಾನಿಸಿದೆ.