ಮಂಗಳೂರು, ಆ.28 (DaijiworldNews/HR): ಪಾವಂಜೆ ದೇವಳದಲ್ಲಿ ಯುವಕ-ಯುವತಿಯರು ಮಾಡಿರುವ ಟಿಕ್ ಟಾಕ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಳಿಕ ದೇವಾಸ್ಥಾನದಲ್ಲಿ ವಿಡಿಯೋ ಮಾಡಿರುವ ತಪ್ಪಿಗಾಗಿ ಯುವಕ ಹಾಗೂ ಯುವತಿಯರು ಕ್ಷಮೆ ಕೇಳಿದ್ದಾರೆ.
ಹಳೆಯಂಗಡಿ ಸಮೀಪದ ಪಾವಂಜೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಪ್ರತೀಕ್ ಶೆಟ್ಟಿ ಎಂಬ ಯುವಕ ಹಾಗೂ ಮೂವರು ಯುವತಿಯರು ಟಿಕ್ ಟಾಕ್ ವಿಡಿಯೋ ಮಾಡಿದ್ದು, ದೇವಳದ ಪಾವಿತ್ರ್ಯಕ್ಕೆ ಧಕ್ಕೆ ಉಂಟಾಗಿದ್ದು, ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದು ಯುವಕ ಹಾಗೂ ಯುವತಿಯರು ಕ್ಷಮೆ ಕೇಳಿದ್ದಾರೆ.
ಇನ್ನು ಯುವಕ ಹಾಗೂ ಯುವತಿಯರು ಮಾಡಿರುವ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ವರ್ತನೆಗೆ ಭಕ್ತರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.