ಬ್ರಹ್ಮಾವರ, ಆ 28 (DaijiworldNews/PY): 32 ವರ್ಷದ ವಿವಾಹಿತ ಮಹಿಳೆ ಆಗಸ್ಟ್ 14ರಂದು ಮನೆಯಿಂದ ತೆರಳಿದ್ದು ವಾಪಾಸ್ಸು ಬಾರದೇ ಕಾಣೆಯಾಗಿದ್ದಾರೆ.
ಕಾಣೆಯಾದ ಮಹಿಳೆಯನ್ನು ಕುಂದಾಪುರ ತಾಲೂಕಿನ ತೆಕ್ಕಟ್ಟೆ ಗ್ರಾಮದ ರಾಮಮಂದಿರ ರಸ್ತೆಯ ದೇವಾಡಿಗರ ಬೆಟ್ಟು ನಿವಾಸದ ಸುನೀತಾ (32) ಎಂದು ಗುರುತಿಸಲಾಗಿದೆ. ಆಗಸ್ಟ್ 14ರಂದು ಮನೆಯಿಂದ ತೆರಳಿದವರು ಮನೆಗೆ ವಾಪಾಸ್ಸಾಗದೇ ಕಾಣೆಯಾಗಿದ್ದಾರೆ.
5.2 ಅಡಿ ಎತ್ತರ, ಬಿಳಿ ಮೈ ಬಣ್ಣ, ಕಪ್ಪು ಬಣ್ಣದ ಬಿಳಿ ಚುಕ್ಕೆ ಇರುವ ಚೂಡಿದಾರ, ಕಪ್ಪು ಬಣ್ಣದ ಪ್ಯಾಂಟ್ ಹಾಗೂ ಬಿಳಿ ಚುಕ್ಕೆವುಳ್ಳ ಬಿಳಿ ಬಣ್ಣದ ವೇಲ್ ಧರಿಸಿದ್ದರು.
ಮಹಿಳೆಯ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಪೊಲೀಸ್ ಠಾಣೆ: 0820-2564155, ಮೊಬೈಲ್ ಸಂಖ್ಯೆ: 9480805454 ಅಥವಾ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿ, ಬ್ರಹ್ಮಾವರ: 0820-2561966, 9480805432 ಅನ್ನು ಸಂಪರ್ಕಿಸುವಂತೆ ಕೋಟ ಪೊಲೀಸ್ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.