ವಿಟ್ಲ, ಆ. 27 (DaijiworldNews/SM): ಜಾಗದ ವಿಚಾರದಲ್ಲಿ ತಂಡ ಕಟ್ಟಿಕೊಂಡು ಕಾಳೀಶ್ವರ ಸ್ವಾಮೀ ಎಂದು ಹೇಳಿಕೊಂಡಿರುವ ವ್ಯಕ್ತಿಯಿಂದ ಹಲ್ಲೆ ಆರೋಪ ವ್ಯಕ್ತವಾಗಿದೆ.
ಕೊಳ್ನಾಡು ಗ್ರಾಮದಲ್ಲಿ ಹಲ್ಲೆ ಪ್ರಕರಣ ನಡೆದಿದೆ. ಕೊಳ್ನಾಡು ಗ್ರಾಮದ ಖಂಡಿಗ ಕಾಳೀಶ್ವರ ಸ್ವಾಮಿ ಯಾನೆ ಸುರೇಶ್ ಪ್ರಭು ಹಲ್ಲೆ ನಡೆಸಿರುವ ಆರೋಪ ಎದುರಿಸುತ್ತಿರುವವರು.
ಜಮೀನು ವಿವಾದವೇ ಕೊಲೆ ಯತ್ನಕ್ಕೆ ಕಾರಣ ಎನ್ನಲಾಗಿದೆ. ದೊಣ್ಣೆ, ಕಬ್ಬಿಣ ರಾಡ್ ಮತ್ತು ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಸುಳ್ಯ ಅಲೆಟ್ಟಿಯ ಪಟಕ್ಕುಂಜ ನಿವಾಸಿ ಚೇತನ್ ನಾಯಕ್(38) ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದಾರೆ. ಕಾಳೀಮಾತೆಯ ದೇವಸ್ಥಾನ ಎದುರಿನ ರಸ್ತೆಯಲ್ಲೇ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ ಎಂದು ಆರೋಪ ವ್ಯಕ್ತವಾಗಿದೆ.
ರಕ್ತದ ಮಡುವಿನಲ್ಲಿ ಪ್ರಜ್ಞಾಹೀನರಾಗಿ ಬಿದ್ದಿದ್ದ ಚೇತನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.