ಕಾಸರಗೋಡು, ಆ 27 (DaijiworldNews/PY): ನಿರಂತರವಾಗಿ ಮನೆಯಿಂದ ಹಣ ಖಾಲಿವಾಗುತ್ತಿರುವ ಬಗ್ಗೆ ಮನೆ ಮಾಲಕನ ತಂತ್ರಕ್ಕೆ ಕಳ್ಳ ಸಿಕ್ಕಿ ಬಿದ್ದ ಘಟನೆ ಬದಿಯಡ್ಕ ಠಾಣಾ ವ್ಯಾಪ್ತಿಯ ನೀರ್ಚಾಲ್ ಎಂಬಲ್ಲಿ ನಡೆದಿದೆ.
ಕಳ್ಳರ ದೃಶ್ಯ ಕ್ಯಾಮರಾ ಕಣ್ಣಲ್ಲಿ ಬಿದ್ದಿದ್ದು, ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ನೀರ್ಚಾಲ್ ಪೂವಳದ ರೋಮನ್ ಡಿಸೋಜ ಎಂಬವರು ಕಳ್ಳನನ್ನು ಪತ್ತೆ ಹಚ್ಚಲು ತಂತ್ರ ಯಶಸ್ವಿಯಾಗಿದೆ.
ರೋಮನ್ ಡಿಸೋಜ ಅವರು ಸೆಂಟ್ರಿಂಗ್ ಗುತ್ತಿಗೆದಾರರಾಗಿದ್ದು, ಪತ್ನಿ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ತನ್ನ ಜೊತೆ ಕೆಲಸ ಮಾಡುವ ಕಾರ್ಮಿಕರಿಗೆ ಸಂಬಳ ನೀಡಲು ರೋಮನ್ ಡಿಸೋಜ ರವರು ಹಣವನ್ನು ಮನೆಯಲ್ಲಿ ಇಡುತ್ತಿದ್ದರು. ಈ ಹಣ ಆಗಾಗ ಕಳವಾಗುತ್ತಿತ್ತು.
ರೋಮನ್ ಬೆಳಿಗ್ಗೆ ತೆರಳಿದರೆ ಸಂಜೆ ಮನೆಗೆ ಮರಳುತ್ತಿದ್ದರು. ಮನೆಗೆ ಬಂದಾಗ ಹಣ ನಾಪತ್ತೆಯಾಗುತ್ತಿತ್ತು. ಹಲವು ಬಾರಿ ಕಳವು ನಡೆದಿತ್ತು. ಇದರಿಂದ ಮೊಬೈಲ್ ಕ್ಯಾಮರಾ ಅನ್ನು ಇರಿಸಿ ನಿಗಾ ಇರಿಸಿದ್ದರು. ಇದರಂತೆ ಎರಡು ದಿನಗಳ ಹಿಂದೆ ಕಳ್ಳ ಈ ಕ್ಯಾಮರಾದಲ್ಲಿ ಸೆರೆ ಸಿಕ್ಕಿದ್ದಾನೆ.
ಕೃತ್ಯಕ್ಕೆ ಸಂಬಂಧಪಟ್ಟಂತೆ ಪೂವಳದ ಫಾಯಿಜ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯ ಪತ್ತೆಗಾಗಿ ತನಿಖೆ ಆರಂಭಿಸಿದ್ದಾರೆ.