ನವದೆಹಲಿ, ಅ 30 (MSP): 2015ರ ಜೂನ್ ನಲ್ಲಿ ವಿವಾಹವಾದ ಸಲಿಂಗಿ ದಂಪತಿಗಳು ಮಗು ಪಡೆಯುವ ಇಚ್ಚೆಯಿಂದ ಗರ್ಭ ಧರಿಸಿ ಇಬ್ಬರೂ ಆ ಮಗುವನ್ನು ತಮ್ಮ ಗರ್ಭದಲ್ಲಿರಿಸಿ ಒಂದೇ ಮಗುವಿಗೆ ಜನ್ಮ ನೀಡಿದ ಅಚ್ಚರಿಯ ಘಟನೆ ನಾರ್ಥ್ ಟೆಕ್ಸಾಸ್ ನ ಮೌಂಟೇನ್ ಸ್ಪ್ರಿಂಗ್ಸಿ ಎಂಬಲ್ಲಿ ನಡೆದಿದೆ. ಅಲ್ಲದೆ ಈ ಅಚ್ಚರಿಯ ವೈದ್ಯಕೀಯಲೋಕದಲ್ಲಿ ಮೊದಲ ಬಾರಿಗೆ ನಡೆದಿದೆ ಎನ್ನಲಾಗುತ್ತಿದೆ.
ಟೆಕ್ಸಾಸ್ ನಿವಾಸಿಗಳಾದ ಆಶ್ಲೀ ಮತ್ತು ಬ್ಲಿಸ್ ಕೌಲ್ಟರ್ ಸಲಿಂಗಿಗಳಾಗಿ ವಿವಾಹವಾಗಿ ಜೀವನ ಸಾಗಿಸುತ್ತಿದ್ದವರು. ಕೆಲ ಸಮಯದ ಬಳಿಕ ಮಗು ಪಡೆಯುವ ಇಚ್ಚೆಯನ್ನು ಅವರು ಹೊಂದಿದ್ದರು. ಹೀಗಾಗಿ ಪ್ರಯೋಗಲಾಯದಲ್ಲಿ ವೀರ್ಯ ದಾನಿ ಮೂಲಕ ಮಗು ಪಡೆಯಲು ನಿರ್ಧರಿಸಿದ್ದರು. ಇದಕ್ಕಾಗಿ ದಾನಿಯ ವೀರ್ಯ ಹಾಗೂ 36 ವರ್ಷದ ಬ್ಲಿಸ್ ಅವರ ಅಂಡಾಣುಗಳನ್ನು ಪ್ರಯೋಗಲಾಯದವರು ಪಡೆದುಕೊಂಡಿದ್ದರು. ನಂತರ ಇದನ್ನು ಅವರದ್ದೇ ಅಂದರೆ 36 ಬ್ಲಿಸ್ ಅವರ ಗರ್ಭದಲ್ಲಿ ಇರಿಸಲಾಯಿತು. ಆದರೆ ೫ ದಿನಗಳ ನಂತರ ಪೂರ್ಣಾವಧಿಯಾಗಿ ಗರ್ಭಿಣಿ ಆಗಿ ಮಗುವಿಗೆ ಜನ್ಮ ನೀಡಲು ಅವರು ನಿರಾಕರಿಸಿದರು. ಈ ಹಿನ್ನಲೆಯಲ್ಲಿ ಮತ್ತೆ ವೈದ್ಯರ ಸಲಹೆಯಂತೆ ಅಂಡಾಣುಗಳನ್ನು ಬ್ಲಿಸ್ ಅವರ ಗರ್ಭದಿಂದ ತೆಗೆದು, 28 ವರ್ಷದ ಆಶ್ಲೆ ಕೌಲ್ಟರ್ ಅವರ ಗರ್ಭದಲ್ಲಿ ಇರಿಸಲಾಯಿತು. ಹೀಗಾಗಿ ಇಬ್ಬರ ಗರ್ಭದಲ್ಲಿದ್ದ ಮಗು 2018 ರ ಜೂನ್ ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಆಶ್ಲೇ ಮತ್ತು ಬ್ಲಿಸ್ ಆರು ವರ್ಷಗಳಿಂದ ಪರಿಚಯಸ್ಥರಾಗಿದ್ದು, ಇದೀಗ ದಾನಿಗಳು ಮೂಲಕ ವೀರ್ಯಾಣು ಪಡೆದು ಗಂಡು ಮಗುವಿನ ಪೋಷಕರಾಗಿದ್ದಾರೆ. ಇವರಿಬ್ಬರು ಡಾ. ಕ್ಯಾಥಿ ಡೂಡಿ ಎಂಬ ವೈದ್ಯರ ಮಾರ್ಗದರ್ಶನದಂತೆ ಚಿಕಿತ್ಸೆ ಪಡೆದಿದ್ದರು.