ಕಡಬ, ಆ.26 (DaijiworldNews/SM): ನಗರಗಳಲ್ಲಿ ಕೇಳಿ ಬರುತ್ತಿದ್ದ ವೀಡಿಯೋ ಟ್ರ್ಯಾಪ್ ಜಾಲ ಇದೀಗ ಹಳ್ಳಿಗೂ ಕಾಲಿಟ್ಟಿದ್ದು, ವೀಡಿಯೋ ಕಾಲ್ ನಲ್ಲಿ ಬಟ್ಟೆ ಬಿಚ್ಚಿದ ಕಡಬದ ಆಟೋ ಚಾಲಕನ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಕಡಬ ಸಮೀಪದ ಬಿಳಿನೆಲೆಯಲ್ಲಿ ಆಟೋ ಚಾಲಕನಾಗಿರುವ ಯುವಕನಿಗೆ ಯುವತಿಯೋರ್ವಳು ನಗ್ನವಾಗಿ ವೀಡಿಯೋ ಕಾಲ್ ಮಾಡಿದ್ದಾಳೆ. ಇದನ್ನು ಕಂಡು ಈ ಕಡೆಯಿಂದ ಯುವಕನೂ ಬಟ್ಟೆ ಬಿಚ್ಚಿದ್ದಾನೆ. ರಾತ್ರಿ ಹೊತ್ತು ನಡೆದ ಈ ಸಂಭಾಷಣೆಯ ವೀಡಿಯೋ ತುಣುಕೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಯುವಕನ ಮಾನ ಹರಾಜಾಗಿದೆ.
ಅಪರಿಚಿತರು ವೀಡಿಯೋ ಕಾಲ್ ಮಾಡಿ ವಂಚನೆ ನಡೆಸುವುದು ಹನಿಟ್ರ್ಯಾಪ್ ನಡೆಸುವುದು ಸಾಮಾನ್ಯವಾಗಿ ಬಿಟ್ಟಿದೆ. ವಂಚಕರ ಬಲೆಗೆ ಅನೇಕರು ಬಿದ್ದಿರುವ ನಿದರ್ಶನಗಳಿವೆ. ಈ ಹಿನ್ನೆಲೆಯಲ್ಲಿ ಅಪರಿಚಿತರ ಯಾವುದೇ ವಿಡಿಯೋ ಕಾಲ್ ಬಂದಲ್ಲಿ ಅವುಗಳನ್ನು ಸ್ವೀಕರಿಸದಿರಿ. ಅದರಲ್ಲೂ ಯಾವುದೇ ಕಾರಣಕ್ಕೂ ನಿಮ್ಮ ಮುಖ ತೋರಿಸುವುದಾಗ, ನಗ್ನತೆ ತೋರಿಸುವುದು ತಪ್ಪಿಯೂ ಮಾಡದಿರಿ. ಇದೇ ವಿಚಾರನ್ನು ಬಳಸಿ ಹಣಕ್ಕೆ ಬೇಡಿಕೆ ಇಡಲಾಗುತ್ತಿದೆ.